ಪುತ್ತೂರು: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಚಾಮರಾಜನಗರದಲ್ಲಿ ನವಂಬರ್ 9 ರಿಂದ 11 ರವರೆಗೆ ನಡೆಯಲಿರುವ ರಾಜ್ಯ ಮಟ್ಟದ ಚೆಸ್ ಪಂದ್ಯಾಟಕ್ಕೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಧನುಷ್ ರಾಮ್ ಆಯ್ಕೆಗೊಂಡಿದ್ದಾನೆ. ಈತನು ಪುತ್ತೂರು ಕರಿಯಾಲದ ದಿನೇಶ್ ಪ್ರಸನ್ನ ಮತ್ತು ಉಮಾ ದಂಪತಿ ಪುತ್ರ.
ಹಾಗೆಯೇ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ದಾವಣಗೆರೆಯಲ್ಲಿ ನವಂಬರ್ 10 ಹಾಗೂ 11ರಂದು ನಡೆಯಲಿರುವ ರಾಜ್ಯಮಟ್ಟದ ಖೋ ಖೋ ಪಂದ್ಯಾಟಕ್ಕೆ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಅಶ್ವಿತ್ ಭಂಡಾರಿ ಆಯ್ಕೆಯಾಗಿದ್ದಾನೆ. ಈತನು ಬಂಟ್ವಾಳ ಪುಣಚ ಗ್ರಾಮದ ಜಗದೀಶ್ ಭಂಡಾರಿ ಮತ್ತು ರವೀನ ಭಂಡಾರಿ ದಂಪತಿ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ