ಕಲ್ಲಡ್ಕ: ಸ್ನೇಹ ಸಂಜೀವಿನಿ ಒಕ್ಕೂಟದಿಂದ "ದೀಪಸಂಜೀವಿನಿ"

Upayuktha
0

ಕಲ್ಲಡ್ಕ: ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್‌ನ ಸ್ನೇಹ ಸಂಜೀವಿನಿ ಒಕ್ಕೂಟ ದ ಸದಸ್ಯರಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದೀಪಾವಳಿ ಹಬ್ಬದ ಪ್ರಯುಕ್ತ "ದೀಪ ಸಂಜೀವಿನಿ" ಕಾರ್ಯ್ರಮ ಆಯೋಜಿಸಿ ಒಕ್ಕೂಟ ಮಹಿಳೆಯರಿಂದ ವಿವಿಧ ವಿನ್ಯಾಸದ ಮಣ್ಣಿನ ಹಣತೆಗಳ ಹಾಗೂ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ವೀರಕಂಭ ಮಜಿ ಶಾಲಾ ಹತ್ತಿರ ಇರುವ ಶ್ರೀ ಶಾರದಾ ಕಾಂಪ್ಲೆಕ್ಸ್  ನಲ್ಲಿ ಆಯೋಜಿಸಲಾಗಿತ್ತು.


ಹಿರಿಯರಾದ ನೋಣಯ್ಯರವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ವಲಯ ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಎ, ಬಂಟ್ವಾಳ ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕಿ ಕುಸುಮ, ಬಿಆಆರ್‌ಪಿಇಬಿ ಸವಿತ, ಒಕ್ಕೂಟದ ಅದ್ಯಕ್ಷರು, ಎಂಬಿಕೆ,  ಕೃಷಿ ಸಖಿ, ಉದ್ಯೋಗ ಸಖಿ, ಪಶು ಸಖಿ, ಎಲ್‌ಸಿಆರ್‌ಪಿ, ಒಕ್ಕೂಟ ಸದಸ್ಯರು, ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top