ಪರಿಪೂರ್ಣ ವ್ಯಕ್ತಿತ್ವದ ಡಾ.ಲಕ್ಷ್ಮಣ್ ಪ್ರಭುಗಳ ಅಗಲಿಕೆಯಿಂದ ಶೂನ್ಯತೆ ಸೃಷ್ಟಿ: ಭುವನೇಶ್ವರಿ ಹೆಗಡೆ

Upayuktha
0



ಮಂಗಳೂರು: ದಕ್ಷಿಣ ಕನ್ನಡ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಕವಿ ಹೃದಯದ ಹಿರಿಯ ಖ್ಯಾತ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಅವರಿಗೆ ಮಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ನಲ್ಲಿ ಶ್ರದ್ಧಾಂಜಲಿ  ಸಭೆ ಏರ್ಪಡಿಸಲಾಗಿತ್ತು. 




ಕ.ಸಾ.ಪ. ಮಂಗಳೂರು ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಎಸ್. ರೇವಣಕರ್ ರವರು ಅಧ್ಯಕ್ಷತೆ  ವಹಿಸಿದ್ದರು. ನುಡಿನಮನ ಸಲ್ಲಿಸಿ ಮಾತನಾಡಿದ ಶ್ರೀಮತಿ ಭುವನೇಶ್ವರಿ ಹೆಗಡೆಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ ವ್ಯಕ್ತಿತ್ವ, ಹಾಸ್ಯಪ್ರಿಯತೆ ಮತ್ತು ಕರ್ತವ್ಯ ಬದ್ಧತೆಯನ್ನು ಸಭೆಗೆ ಪರಿಚಯಿಸಿ, ಒಬ್ಬ ಆದರ್ಶ ವೈದ್ಯನಲ್ಲಿ ಇರಬೇಕಾದ ಎಲ್ಲ ಗುಣವೂ ಅವರಲ್ಲಿ ಇತ್ತು, ಕೆಲವು ವ್ಯಕ್ತಿಗಳಿಗೆ ಪರ್ಯಾಯವೇ ಇರುವುದಿಲ್ಲ. ಅಂತಹ ವ್ಯಕ್ತಿಗಳಲ್ಲಿ ಡಾ.ಜಿ.ಜಿ. ಲಕ್ಷ್ಮಣ ಪ್ರಭುಗಳು ಒಬ್ಬರು. ಅವರ ಅಗಲಿಕೆಯಿಂದ ಉಂಟಾದ ಶೂನ್ಯತೆ ಹಾಗೆಯೆ ಉಳಿಯುತ್ತದೆ. ಅವರು ವೈದ್ಯರಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ಆದರ್ಶಪ್ರಾಯರು' ಎಂದು ನುಡಿದರು.  




ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಯವರು ಡಾ.ಜಿ.ಜಿ.ಲಕ್ಷ್ಮಣ ಪ್ರಭುಗಳ ರೋಟರಿ, ಸಾಹಿತ್ಯದ ಒಡನಾಟ ಮತ್ತು ಸ್ನೇಹವನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು. ಇನ್ನೋರ್ವ ಗೌರವ ಕಾರ್ಯದರ್ಶಿ ಡಾ.ಮುರಲಿ ಮೋಹನ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು. ಎಲ್ಲರೂ ಒಂದು ನಿಮಿಷದ ಮೌನ ಪ್ರಾರ್ಥನೆಗೈದು, ಪುಷ್ಪ ನಮನ ಸಲ್ಲಿಸಿದರು. ಗೌರವ ಕೋಶಾಧಿಕಾರಿ ಸುಬ್ರಾಯ ಭಟ್ ವಂದಿಸಿದರು. ಭಟ್ ವಂದಿಸಿದರು. ಕ.ಸಾ.ಪ. ಕಾರ್ಯಕಾರಿಣಿಯ ಬಿ.ಕೃಷ್ಣಪ್ಪ ನಾಯ್ಕ್, ಸನತ್ ಕುಮಾರ್ ಜೈನ್, ಉಷಾ ಜಿ.ಪ್ರಸಾದ್ ಜೀ, ಅಭಾ ಮತ್ತಿತ್ತರರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top