ಪುತ್ತೂರು: ಲಯನ್ಸ್ ಜಿಲ್ಲೆ 317 ಡಿ ಯ ಲಯನ್ಸ್ ಉಷಾ ಮನೋಜ್ ನೇತೃತ್ವದ ಪ್ರಾಂತ್ಯ 1 ರ ಪ್ರಾಂತೀಯ ಸಮ್ಮೇಳನದ ಸೇವಾ ಯೋಜನೆಯಾಗಿ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಚಿತ್ರಾಪುರದ ಶಾಲಾರಂಗಮಂದಿರ ನಿಮಾರ್ಣಕ್ಕಾಗಿ ಭೂಮಿ ಪೂಜೆಯು ಶಾಲಾ ವಠಾರದಲ್ಲಿ ನೆರೆವೇರಿತು.
ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಉಷಾ ಮನೋಜ್ ರಂಗಮಂದಿರಕ್ಕೆ ಶಿಲಾನ್ಯಾಸ ನಡೆಸಿಕೊಟ್ಟರು. ಮುಖ್ಯ ಅತಿಥಿ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಪಿ ಚಿತ್ರಾಪುರ ಮಾತನಾಡಿ ನವಮಂಗಳೂರು ಲಯನ್ಸ್ ಕ್ಲಬ್ ನೇತೃತ್ವದಲ್ಲಿ ನಡೆಯುತ್ತಿರುವ ಶಾಲಾ ರಂಗಮಂದಿರ ಸೇವಾಯೋಜನೆ ವಿದ್ಯಾರ್ಥಿಗಳ ಪ್ರತಿಭಾ ಅಭಿವ್ಯಕ್ತಿಗೆ ಬಲು ಉಪಯುಕ್ತವಾಗಿದೆಂದು ನುಡಿದು ಲಯನ್ಸ್ ಕ್ಲಬ್‍ನ್ನು ಅಭಿನಂದಿಸಿದರು. ಪಣಂಬೂರು ಮೊಗವೀರ ಸಂಘದ ಅಧ್ಯಕ್ಷ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ ಶುಭ ಹಾರೈಸಿದರು.
ಕೂಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿಸಂಘದ ಕೋಶಾಧಿಕಾರಿ ಭರತ್‍ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ತೇಜ್‍ಪಾಲ್, ಕುಮಾರ್ ಬಂಗೇರ, ಶಾಲಾ ನಿವೃತ್ತ ಶಿಕ್ಷಕಿ ಪುಷ್ಪಾವತಿ, ಶ್ರೀನಿವಾಸ್‍ರಾವ್ ಮುಖ್ಯ ಅತಿಥಿಗಳಾಗಿದ್ದರು.
ನವಮಂಗಳೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಅಬೂಬಕರ್‍ಕುಕ್ಕಾಡಿ, ಪ್ರಾಂತೀಯ ಸಮ್ಮೇಳನದ ಅಧ್ಯಕ್ಷ ಕರುಣಾಕರ ಶೆಟ್ಟಿ, ಕಾರ್ಯದರ್ಶಿ ಮುರಳಿಧರ್, ನಿರ್ದೇಶಕ ಮಂಡಳಿ ಸದಸ್ಯರಾದ ಮನೋಜ್‍ಕುಮಾರ್, ನೂರ್‍ಜಹಾನ್ ಕುಕ್ಕಾಡಿ, ಸೆಂತಿಲ್, ಹರಿ, ಉಪಾಧ್ಯಕ್ಷ ಅನಿಲ್ ಕುಮಾರ್ , ಶಾಲಾ ಮುಖ್ಯೋಪಾಧ್ಯಾಯಿನಿ ಶೋಭಾ, ಹಿರಿಯ ಶಿಕ್ಷಕಿ ಸುಕೇಶಿನಿ, ಸಿಂತಿಯಾ, ನೀತಾತಂತ್ರಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ