ನ.17 ರಂದು ಆಳ್ವಾಸ್ ನಲ್ಲಿ ಎರಡನೇ ಬಾರಿ ಚಾರುವಸಂತ ನಾಟಕ ಪ್ರದರ್ಶನ

Upayuktha
0



ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದ್ರೆ ಆಶ್ರಯದಲ್ಲಿ ನ.17 ರಂದು ಸಂಜೆ 6.30 ಕ್ಕೆ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯಿಸುವ ಡಾ.ನಾಡೋಜ ಹಂಪನಾ ವಿರಚಿತ  ಚಾರುವಸಂತ ದೇಸೀ ಕಾವ್ಯದ ರಂಗರೂಪದ ಪ್ರದರ್ಶನವನ್ನು ಎರಡನೇ ಬಾರಿಗೆ ಏರ್ಪಡಿಸಲಾಗಿದೆ.



ಈಗಾಗಾಲೇ ಬೆಂಗಳೂರು, ಮೈಸೂರು, ಗೌರಿಬಿದನೂರು, ತುಮಕೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ ಮುಂತಾದೆಡೆ  ಅಪಾರ ಜನಮೆಚ್ಚುಗೆ ಪಡೆದ ಈ ನಾಟಕವನ್ನು ಪ್ರಸಿದ್ಧ ರಂಗನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದು ಸಾಹಿತಿ ಡಾ.ನಾ.ದಾಮೋದರ ಶೆಟ್ಟಿಯವರು ರಂಗರೂಪ ನೀಡಿದ್ದಾರೆ.



ಬಹುಜನರ ಅಪೇಕ್ಷೆಯ ಮೇರೆಗೆ ಈ ಪ್ರದರ್ಶನವನ್ನು ಮತ್ತೆ ಮೂಡುಬಿದ್ರೆಯಲ್ಲಿ ಏರ್ಪಡಿಸಲಾಗಿದ್ದು, ಸಮಯಕ್ಕೆ ಸರಿಯಾಗಿ ನಡೆಯುವ ಈ ನಾಟಕ ನೋಡಲು ಪ್ರವೇಶ ಉಚಿತವಾಗಿದೆಯೆಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top