ಸಿಬಿಎಸ್ಇ ಕೇರಳ ರಾಜ್ಯಮಟ್ಟದ ಕಲೋತ್ಸವ: ಸಂವೃತಾ ಭಟ್ ಗೆ 'ಎ' ಗ್ರೇಡ್

Upayuktha
0


ಕಾಸರಗೋಡು: ನವೆಂಬರ್ 24, 25, 26ರಂದು ಕೇರಳದ ಕಾಲಡಿಯಲ್ಲಿ ಜರಗುತ್ತಿರುವ ಸಿಬಿಎಸ್ಇ ರಾಜ್ಯಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿನಿ ಸಂವೃತಾ ಭಟ್, ಎ ಗ್ರೇಡ್ ಮತ್ತು ಮಲಯಾಳಂ ಸುಗಮ ಸಂಗೀತದಲ್ಲಿ ಬಿ ಗ್ರೇಡ್ ಪಡೆದು ಬಹುಮಾನ ಗೆದ್ದಿದ್ದಾಳೆ.



ಕಳೆದ ಮೂರು ವರ್ಷಗಳಿಂದ ಶಾಸ್ತ್ರೀಯ ಸಂಗೀತವನ್ನು ಚಿನ್ಮಯೀ ಮನೀಶ್ ಚಾಲಕ್ಕುಡಿ ಇವರಲ್ಲಿ ಕಲಿಯುತ್ತಿದ್ದಾಳೆ. ಮಲಯಾಳಂ ಸುಗಮ ಸಂಗೀತವನ್ನು ಗುರು ರಾಗೇಶ್ ಪರಯಂಪಳ್ಳಂ ಅವರಿಂದ ಕಲಿಯುತ್ತಿದ್ದಾಳೆ.


ಇವಳು ಕಾಸರಗೋಡಿನ ಗಣೇಶ್ ಭಟ್ ಪೇರಿಯ ಮತ್ತು ಸ್ವಾತಿ ಭಟ್ ದಂಪತಿಗಳ ಪುತ್ರಿ.


ಕಳೆದ ವರ್ಷ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ಕೇರಳ ರಾಜ್ಯದಲ್ಲೇ ಪ್ರಥಮ ಬಹುಮಾನ ಪಡೆದಿದ್ದಳು. ಈ ವರ್ಷ ಓಣಂ ಹಬ್ಬದ ಸಂದರ್ಭದಲ್ಲಿ ಸಂವೃತಾ ಭಟ್ ಪೇರಿಯ ಹಾಡಿರುವ ಆಲ್ಬಂ ಹಾಡು ಪೊನ್ ಚಿಙ್ಙ ಪ್ಪುಲರಿ- ಸೂಪರ್ ಹಿಟ್ ಆಗಿತ್ತು. ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದು ಮೆಚ್ಚುಗೆಗೆ ಪಾತ್ರವಾಗಿತ್ತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top