ಬೆಳ್ತಂಗಡಿ: ಶಿರಸಿಯ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ( ರಿ ) , ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ಆಶ್ರಯದಲ್ಲಿ ಪ್ರಾಥಮಿಕ , ಪ್ರೌಢಶಾಲಾ ಹಾಗೂ ಪ.ಪೂ ಕಾಲೇಜು ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ನವೆಂಬರ್ 18 ಶನಿವಾರದಂದು ಮಧ್ಯಾಹ್ನ 2 ಘಂಟೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ತಾಲೂಕು ಭಗವದ್ಗೀತಾ ಅಭಿಯಾನದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಗೌರವಾಧ್ಯಕ್ಷರು ಡಾ. ಶ್ರೀಧರ ಭಟ್ , ಮುಖ್ಯಸ್ಥರು , ಸಂಸ್ಕೃತ ಭಾಷಾ ವಿಭಾಗ , ಎಸ್.ಡಿ.ಎಂ ಕಾಲೇಜು , ಉಜಿರೆ. ಅಧ್ಯಕ್ಷರು ಪ್ರಮೋದ್ ಕುಮಾರ್ ಬಿ, ಪ್ರಾಚಾರ್ಯರು , ಎಸ್.ಡಿ.ಎಂ ಪ.ಪೂ ಕಾಲೇಜು , ಉಜಿರೆ. ಸಂಯೋಜಕರು ಡಾ.ಪ್ರಸನ್ನಕುಮಾರ ಐತಾಳ್, ಮುಖ್ಯಸ್ಥರು, ಸಂಸ್ಕೃತ ಭಾಷಾ ವಿಭಾಗ , ಎಸ್.ಡಿ.ಎಂ ಪ.ಪೂ ಕಾಲೇಜು , ಉಜಿರೆ.
ಕಾರ್ಯದರ್ಶಿ ಉದಯಸುಬ್ರಹ್ಮಣ್ಯ, ಎಸ್.ಡಿ.ಎಂ ಪ್ರಕೃತಿ ಚಿಕಿತ್ಸಾ ಹಾಗೂ ಯೋಗವಿಜ್ಞಾನ ವಿದ್ಯಾಲಯ , ಉಜಿರೆ. ಸಹ ಕಾರ್ಯದರ್ಶಿ ಹರೀಶ್ ಕುಮಾರ್ , ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಉಜಿರೆ. ಕೋಶಾಧಿಕಾರಿ ಮಹೇಶ್ ಭಟ್ , ಎಸ್.ಡಿ.ಎಂ ವಸತಿ ಪ.ಪೂ ಕಾಲೇಜು , ಉಜಿರೆ. ಸದಸ್ಯರು ಸುಭಾಷ್ ರಾವ್ ಬೋಳೂರು , ಭವ್ಯಾ ಹೆಗಡೆ , ನಾರಾಯಣ ವೈಲಾಯ , ಸುಧಾಶ್ರೀ , ಅಭಿಜ್ಞಾ ಉಪಾಧ್ಯಾಯ , ವಿದ್ಯಾ ಮರಾಠೆ, ಭಾಗ್ಯಲಕ್ಷ್ಮೀ , ವಿಜಯಲಕ್ಷ್ಮೀ ಬಿ.ವಿ , ಕಾರ್ತಿಕೇಶ , ಸುಜನಾ , ಮಧುಸೂದನ್ , ಶ್ರೇಯಸ್ ಪಾಳಂದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

.jpg)
