ಭಗವದ್ಗೀತೆ ಜೀವನದಲ್ಲಿ ಮೂಡುವ ಸಮಸ್ಯೆಗೆ ಪರಿಹಾರ: ಶರತ್‌ಕೃಷ್ಣ ಪಡ್ವೆಟ್ನಾ

Upayuktha
0

 ಶ್ರೀ ಭಗವದ್ಗೀತಾ ಅಭಿಯಾನ -2023. ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತೆ ಸ್ಪರ್ಧೆಗಳ ಉದ್ಘಾಟನೆ 




ಉಜಿರೆ: ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿರುವ  ಭಗವದ್ಗೀತೆಯಿಂದ  ನಮ್ಮ  ಜೀವನದ ಹಲವು ಕಡೆ ಮೂಡುವ ಸಮಸ್ಯೆಗಳಿಗೆ  ಪರಿಹಾರವು ದೊರೆಯುತ್ತದೆ . ಆದ್ದರಿಂದ ಭಗವದ್ಗೀತೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲೇ ನೋಡದೇ , ಸಮಗ್ರ ದೃಷ್ಟಿಯಿಂದ ನೋಡಬೇಕು ಎಂದು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ  ಶರತ್‌ಕೃಷ್ಣ ಪಡ್ವೆಟ್ನಾಯರು ಹೇಳಿದರು.



ಇವರು  ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ , ಸಂಸ್ಕೃತ ಸಂಘ - ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳು , ಉಜಿರೆ ,  ಶ್ರೀ ಧ.ಮಂ. ಪದವಿಪೂರ್ವ ಕಾಲೇಜು  - ಉಜಿರೆ ಮತ್ತು ಯಕ್ಷಭಾರತಿ ( ರಿ ) - ಕನ್ಯಾಡಿ , ಶ್ರೀ ಮದ್ಭಾಗವದ್ಗೀತಾ ಅಭಿಯಾನ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಸಂಸ್ಕೃತ ಸಂಘ(ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ 2023ರ ಅಂಗವಾಗಿ  ಉಜಿರೆಯ ಶ್ರೀ ಧ.ಮಂ. ಪದವಿಪೂರ್ವ ಕಾಲೇಜಿನಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಭಗವದ್ಗೀತಾ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. 



ಅಧ್ಯಕ್ಷತೆ ವಹಿಸಿದ್ದ ಶ್ರೀ ಧ.ಮಂ. ಪ.ಪೂ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್‌ ಕುಮಾರ್‌ ಬಿ. ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಭಗವದ್ಗೀತೆಯು ಪ್ರಮುಖ ಗ್ರಂಥವಾಗಬಲ್ಲದು ಎನ್ನುತ್ತಾ ಇಂತಹ ಅಭಿಯಾನವು ಪ್ರಸ್ತುತ ಕಾಲಕ್ಕೆ ಅಗತ್ಯವಾಗಿದೆ ಎಂದರು.


 

ವೇದಿಕೆಯಲ್ಲಿ ಶ್ರೀ ಧ.ಮಂ. ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಹಾಗೂ ಅಭಿಯಾನದ ಗೌರವಾಧ್ಯಕ್ಷ ಡಾ. ಶ್ರೀಧರ ಭಟ್‌   ಉಪಸ್ಥಿತರಿದ್ದರು.



ಬೆಳ್ತಂಗಡಿ ತಾಲೂಕು ಗೀತಾಭಿಯಾನದ ಸಂಯೋಜಕರಾದ ಹಾಗೂ ಧ.ಮಂ. ಪ.ಪೂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ  ಡಾ. ಪ್ರಸನ್ನಕುಮಾರ್‌ ಐತಾಳ್‌  ಸ್ವಾಗತಿಸಿದರು. ಶಿಕ್ಷಕಿ ಭವ್ಯಾ ಹೆಗಡೆ ಧನ್ಯವಾದ ಸಮರ್ಪಿಸಿ ,  ಶಿಕ್ಷಕಿ ಸುಜನಾ   ಕಾರ್ಯಕ್ರಮ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter      

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top