ನಮ್ಮೂರಿನಲ್ಲಿ ತಯಾರಿಸಿದ ಉತ್ಪನ್ನಗಳ ಖರೀದಿಗಾಗಿ ಬರಲಿದೆ ಸ್ವದೇಶಿ ಮಾರ್ಟ್

Upayuktha
0

ಪುತ್ತೂರು: ಕರ್ನಾಟಕದಲ್ಲಿ ಕೋವಿಡ್ ಸಮಯದಲ್ಲಿ ಸಾಕಷ್ಟು ಮಂದಿ ಸ್ವದೇಶಿ ವಸ್ತುಗಳನ್ನು ತಯಾರಿಸಲು ಮುಂದೆ ಬಂದು ಈಗಲೂ ಅದರಲ್ಲೇ ಜೀವನ ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಮತ್ತಷ್ಟು ಪ್ರೋತ್ಸಾಹಿಸಲು ಶಕ್ತಿ ತುಂಬಲು ಪ್ರಣವ ಭಟ್ ಅವರ ನೇತೃತ್ವದಲ್ಲಿ ನಮ್ಮ ಊರಿನಲ್ಲೇ ನೈಸರ್ಗಿಕವಾಗಿ ತಯಾರಾಗುವ ನಮ್ಮ ಮನೆಗಳಲ್ಲಿ ಕೈಯಲ್ಲೇ ತಯಾರಿಸುವ ವಸ್ತುಗಳನ್ನು ಒಂದೇ ಕಡೆ ಸಿಗುವಂತೆ ಮಾಡಲು ಸ್ವದೇಶಿ ಮಾರ್ಟ್ (Swadeshi Mart) ಎನ್ನುವ ಅತೀ ದೊಡ್ಡ ಡಿಜಿಟಲ್ ವೇದಿಕೆ ಸಿದ್ಧವಾಗುತ್ತಿದೆ.


ಅಡಿಕೆ ಉತ್ಪನ್ನಗಳು, ರಾಗಿ ಉತ್ಪನ್ನಗಳು, ಕೈಯಲ್ಲೇ ತಯಾರಿಸಿದ ಗೊಂಬೆಗಳು, ಗಾಣದ ಎಣ್ಣೆ, ನೈಸರ್ಗಿಕ ಸೋಪು ಹೀಗೆ ವಿವಿಧ ವೈವಿಧ್ಯಮಯ ಉತ್ಪನ್ನಗಳು ಜೊತೆಗೆ ಪ್ರತಿಯೊಬ್ಬರು ಸ್ವ ಉದ್ಯೋಗದಿಂದ ಜೀವನ ಕಟ್ಟಿಕೊಂಡವರು ಅವರಿಗೆ ಇದೊಂದು ವೇದಿಕೆಯಾಗಿ ಕರ್ನಾಟಕದಾದ್ಯಂತ ಮಾರಾಟ ಮಾಡಲು ಸಹಾಯ ಮಾಡುವ ಒಂದು ಸಣ್ಣ ಪ್ರಯತ್ನ ಸ್ವದೇಶ ಮಾರ್ಟ್. 


ಇದು ಅತೀ ಶೀಘ್ರದಲ್ಲಿ ನಿಮ್ಮ ಕೈಗೆ ಸಿಗಲಿದೆ. ಸ್ವದೇಶಿ ಮಾರ್ಟ್ ವೆಬ್‌ಸೈಟ್ ಇದೇ ನವೆಂಬರ್ 25ರಂದು ಬೆಂಗಳೂರಿನಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ನೀಡಿ ಸ್ವದೇಶಿ ವಸ್ತುಗಳನ್ನು ಖರೀದಿಸಿ ಬಳಸುವ ಈ ಅಭಿಯಾನದಲ್ಲಿ ನೀವು ಕೂಡ ಪಾಲ್ಗೊಳ್ಳಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter     

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top