ಬೆಂಗಳೂರು: ಕು|| ಅಂಜನಾ ಸಿಂಹ ಮತ್ತು ಕು|| ಸ್ವಾತಿ ಸಿಂಹ ಇವರ ರಂಗಪ್ರವೇಶವು ನವೆಂಬರ್ 8, ಬುಧವಾರ ಸಂಜೆ 6-00 ಗಂಟೆಗೆ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ಏರ್ಪಡಿಸಿದ್ದು, ಕಲಾವಿದರ ಪರಿಚಯ ಇಲ್ಲಿದೆ:
ಶ್ರೀಮತಿ ಆಶಾ ಸಿಂಹ ಮತ್ತು ಶ್ರೀ ಎಂ.ಡಿ.ಎನ್. ಸಿಂಹ ಅವರ ಪುತ್ರಿಯರಾದ ಕು|| ಅಂಜನಾ ಮತ್ತು ಕು|| ಸ್ವಾತಿ ತಮ್ಮ ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಕೆ ಪ್ರಾರಂಭಿಸಿದರು. ಅವರು ಮೊದಲನೆಯದಾಗಿ ದತಾರ್ ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ಇಂದ ಗುರು ಶ್ರೀಮತಿ ಉಷಾ ದತಾರ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಆಡಳಿತ ಶಿಕ್ಷಣ ಮಂಡಳಿಯಿಂದ ಜೂನಿಯರ್ ಗ್ರೇಡ್ ಪರೀಕ್ಷೆಯನ್ನು ಪೂರೈಸಿದರು.
ಈಗ ಸುಮಾರು 11 ವರ್ಷಗಳಿಂದ ಇವರು ಡಾ. ಶ್ರೀರಂಜಿತಾ ಮತ್ತು ವಿ|| ಜಿ.ಎಸ್. ನಾಗೇಶ್ ಅವರ ಮಾರ್ಗದರ್ಶನದಲ್ಲಿ ಮಲ್ಲೇಶ್ವರದ ಶ್ರೀ ನಾಟ್ಯ ಭಾರತಿ ಟ್ರಸ್ಟ್, ಇವರಲ್ಲಿ ತಮ್ಮ ಕಲಿಕೆ ಮುಂದುವರೆಸಿ ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯ ಮಂಡಳಿ, ಮುಂಬಯಿ ನಡೆಸುವ ಮಧ್ಯಮ, ವಿಶಾರದ ಮತ್ತು ಆಲಂಕಾರ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದಾರಲ್ಲದೆ, ಕರ್ನಾಟಕ ಆಡಳಿತ ಶಿಕ್ಷಣ ಮಂಡಳಿಯಿಂದ ಸೀನಿಯರ್ ಮತ್ತು ಪ್ರೀ-ವಿದ್ವತ್ ಪರೀಕ್ಷೆಗಳನ್ನು ಉತ್ತಮ ಅಂಶಗಳಿಂದ ತೇರ್ಗಡೆ ಹೊಂದಿದ್ದಾರೆ.
ಕು|| ಅಂಜನಾ ಸಿಂಹ ವಾಣಿಜ್ಯ ಮತ್ತು ಪೋಷಣ ವಿಜ್ಞಾನದಲ್ಲಿಎಂ.ಎಸ್ಸಿ ಅಧ್ಯಯನ ನಡೆಸಿದ್ದಾರೆ. ಪ್ರಸ್ತುತ ಸಂಸ್ಕೃತ ಭಾಷೆಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಸ್ವತಂತ್ರ ಪೋಷಣ ಸಲಹೆಗಾರ್ತಿಯಾಗಿ ಕೆಲಸ ಮಾಡುವುದರ ಜೊತೆಗೆ ಮಲ್ಲೇಶ್ವರದ ಇಂದಿರಾ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಾರೆ.
ಕು|| ಸ್ವಾತಿ ಸಿಂಹ ಫ್ಯಾಷನ್ ಮತ್ತು ಅಪಾರಲ್ ಡಿಜೈನ್ನಲ್ಲಿ ಬಿಎಸ್ಸಿ ಅಧ್ಯಯನ ಮುಗಿಸಿ ಪ್ರಸ್ತುತ ಫ್ಯಾಷನ್ ಡಿಜೈನ್ನಲ್ಲಿ ಎಂ.ಡಿಇಎಸ್ ಅಧ್ಯಯನ ನಡೆಸುತ್ತಿದ್ದಾರೆ.
ಈರ್ವರು ನಾಟ್ಯ ಭಾರತಿಯ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಬೆಂಗಳೂರಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು: ಶಿಲ್ಪರಮಂ- ಹೈದರಾಬಾದ್, ಟಿಟಿಡಿ ಬ್ರಹ್ಮೋತ್ಸವಂ, ಅಬುಧಾಬಿ ಮತ್ತು ಇತರ ಸ್ಥಳಗಳಲ್ಲಿ ಅಭಿನಯ ಮಾಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ