ಮಕ್ಕಳ ಕಲಾ ಲೋಕದಿಂದ ರಾಜೇಶ ವಿಟ್ಲ ಅವರಿಗೆ “ಬಾಲಬಂಧು” ಪುರಸ್ಕಾರ

Upayuktha
0


ಬಂಟ್ವಾಳ: ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕವು ಮಕ್ಕಳಿಗಾಗಿ ಕಲೆ ಸಾಹಿತ್ಯ ಚಟುವಟಿಕೆಗಳಲ್ಲಿ ತನ್ನನ್ನು ವಿಪುಲವಾಗಿ ತೊಡಗಿಸಿಕೊಂಡಿರುವವರಿಗೆ ಪ್ರತಿ ವರ್ಷ ನೀಡುವ ತಾಲೂಕು ಮಟ್ಟದ ಬಾಲಬಂಧು ಪುರಸ್ಕಾರಕ್ಕೆ ಈ ಬಾರಿ ರಾಜೇಶ ವಿಟ್ಲ ಆಯ್ಕೆಯಾಗಿದ್ದಾರೆ.



ವಿಟ್ಲದ ಆರ್.ಕೆ. ಕಲಾ ಸಂಸ್ಥೆಯ ಸಹಪ್ರವರ್ತಕರಾಗಿರುವ  ರಾಜೇಶ್ ವಿಟ್ಲ ತನ್ನ ಕಲಾ ವೃತ್ತಿ ಬದುಕಿನೊಂದಿಗೆ ಮಕ್ಕಳಿಗಾಗಿ ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳಲ್ಲಿ ರಜಾ ಶಿಬಿರಗಳನ್ನು ಸಂಘಟಿಸಿ, ಮಕ್ಕಳಲ್ಲಿ ಕಲೆ ಸಾಹಿತ್ಯವನ್ನು ಚಿಗುರಿಸುವ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಗುರುತಿಸಿ ಬಾಲಬಂಧು ಪುರಸ್ಕಾರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.



ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೇತೃತ್ವದಲ್ಲಿ ಡಿಸೆಂಬರ್ 6 ರಂದು ಜರಗಲಿರುವ 17ನೇ ವರ್ಷದ ಬಂಟ್ವಾಳ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ, ಸಮಾರೋಪ ಸಮಾರಂಭದಲ್ಲಿ ರಾಜೇಶ ವಿಟ್ಲ ಅವರನ್ನು ಸನ್ಮಾನಿಸಿ, ಬಂಟ್ವಾಳ ತಾಲೂಕು ಮಟ್ಟದ ಬಾಲಬಂಧು ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದು ಮಕ್ಕಳ ಕಲಾ ಲೋಕದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ತಿಳಿಸಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top