ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ (ಶಾಲಾ ಶಿಕ್ಷಣ) ನಡೆಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿಯ ವಿದ್ಯಾರ್ಥಿಗಳು ಸ್ಪರ್ಧಿಸಿ ಮೂರು ಕಂಚು ಹಾಗೂ ಎರಡು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ನ.15 ರಂದು ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ದರ್ಬೆಯ ನಳಿನಾಕ್ಷ ಎನ್ ಹಾಗೂ ಗಾಯತ್ರಿ ದಂಪತಿಯ ಪುತ್ರ ಪ್ರಥಮ ಪಿ.ಯು.ಸಿ ಯ ಅನಿಕೇತ್.ಎನ್. 100 ಮೀಟರ್ ಬ್ಯಾಕ್ ಸ್ಟ್ರೋಕ್, 200 ಮೀಟರ್ ಇಂಡಿವಿಜುವಲ್ ಮಿಡ್ಲೇ ಯಲ್ಲಿ ತೃತೀಯ, 4x100 ಮೀಟರ್ ಮಿಡ್ಲೇ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಎರಡು ಕಂಚು ಹಾಗೂ ಒಂದು ಬೆಳ್ಳಿ ಪದಕ ಗೆದ್ದಿರುತ್ತಾರೆ.
ಇನ್ನೋರ್ವ ವಿದ್ಯಾರ್ಥಿ ಮರೀಲಿನ ಕೇಶವ ಕುಮಾರ್ ಕೆ.ಎಂ ಮತ್ತು ಮೀನಾಕ್ಷಿ ದಂಪತಿಯ ಪುತ್ರ ಪ್ರಥಮ ಪಿ.ಯು.ಸಿ ಯ ಧನ್ವಿತ್ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ತೃತೀಯ, 4x100 ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನಿಯಾಗಿ ಒಂದು ಕಂಚು, ಒಂದು ಬೆಳ್ಳಿ ಪದಕ ಗೆದ್ದಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ