ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹೋರಾಟ

Upayuktha
0


ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗಿಸಲು ನಮ್ಮ ಹೋರಾಟ ಮುಂದುವರೆಯಲಿದೆ. ಕರ್ನಾಟಕದ ಈ ಹಿಂದಿನ ಸರ್ಕಾರ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿತ್ತು. ಪ್ರಸಕ್ತ ಕರ್ನಾಟಕ ಸರ್ಕಾರವೂ ಕೂಡ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಬೇಕು ಎಂದು ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ ಆಗ್ರಹಿಸಿದರು.


ಅಖಿಲ ಗೋವಾ ಕನ್ನಡ ಮಹಾಸಂಘ ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚೋಲಿ ಗೋವಾ ಇವರ ಸಂಯುಕ್ತ ಆಶ್ರಯದಲ್ಲಿ ಬಿಚೋಲಿಯ ಸರ್ವಣದಲ್ಲಿಆಯೋಜಿಸಿದ್ದ  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ಹಾರ ಸಮರ್ಪಿಸಿ ಅವರು ಮಾತನಾಡುತ್ತಿದ್ದರು.


ಕರ್ನಾಟಕ ಸರ್ಕಾರ ಗೋವಾ ಕನ್ನಡಿಗರ ಬಗ್ಗೆ ಕಾಳಜಿ ವಹಿಸಬೇಕು ಎಂದ ಹನುಮಂತಪ್ಪ ಶಿರೂರ್, ಗೋವಾದಲ್ಲಿರುವ ಎಲ್ಲ ಕನ್ನಡ ಸಂಘಟನೆಗಳೂ ಕೂಡ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಕನ್ನಡ ರಾಜ್ಯೋತ್ಸವ ಆಚರಣೆಗೆ ಸಗತ್ಯ ಸಹಾಯ ಸಹಕಾರ ನೀಡಲು ನಾವು ಸಿದ್ಧ ಎಂದು ಹನುಮಂತಪ್ಪ ಶಿರೂರ್ ರೆಡ್ಡಿ ನುಡಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ಮಭೂಮಿ ಕನ್ನಡ ಸಂಘದ ಖಜಾಂಚಿ ಸುರೇಶ್ ರಕ್ಷಕಿ ಮಾತನಾಡಿ- ಗೋವಾದಲ್ಲಿ ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರವ ಮಕ್ಕಳಿಗೆ ವಿದ್ಯಾರ್ಜನೆಗೆ ಆರ್ಥಿಕ ತೊಂದರೆಯಾದರೆ ನಾವು ಅಗತ್ಯ ಸಹಾಯ ಸಹಕಾರ ನೀಡಲು ಸಿದ್ಧ, ಅಗತ್ಯ ಬಿದ್ದ ವಿದ್ಯಾರ್ಥಿಗಳು ಬಿಚೋಲಿ ಕರ್ಮಭೂಮಿ ಕನ್ನಡ ಸಂಘವನ್ನು ಸಂಪರ್ಕಿಸಬೇಕು ಎಂದರು.


ಈ ಸಂದರ್ಭದಲ್ಲಿ ಹಿರೀಯ ಶಿಕ್ಷಕರಾದ ರಾವುತ್ ಪಠಾಣ್, ಬಿಚೋಲಿ ಕರ್ಮಭೂಮಿ ಕನ್ನಡ ಸಂಘದ ಕಾರ್ಯದರ್ಶಿ ಭರತೇಶ್ ಗುಳಣ್ಣವರ್, ಉಪಾಧ್ಯಕ್ಷ ನಾಗೇಶ ಮೊಟೆಬೆನ್ನೂರ್, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹೊಸ್ಮನಿ ಶಿಕ್ಷಕರಾದ ನಾಟೀಕರ್ ಸರ್ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top