ನಿಟ್ಟೆ: ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಕೋಸ್ಟ್ ಗಾರ್ಡ್ ಕರ್ನಾಟಕ ವತಿಯಿಂದ ಅ.31 ರಂದು ಮಂಗಳೂರಿನ ಪಣಂಬೂರು ಬೀಚ್ ನಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕೆಳಗಿನ ಪದಕಗಳನ್ನು ತಮ್ಮದಾಗಿಸಿಕೊಂಡಿರುವರು. 10 ಕಿ.ಮೀ ಮಹಿಳಾ ವಿಭಾಗದಲ್ಲಿ ಡಾ.ಎನ್ಎಸ್ಎಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು (ವಾಣಿಜ್ಯ) ವಿದ್ಯಾರ್ಥಿನಿ ನಂದಿನಿ ಚಿನ್ನದ ಪದಕ, ಡಾ.ಎನ್ಎಸ್ಎಎಂ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ಪಿಯು (ವಾಣಿಜ್ಯ) ವಿದ್ಯಾರ್ಥಿನಿ ಸಾಕ್ಷಿ ಬೆಳ್ಳಿ ಪದಕ ಪಡೆದಿರುವರು.
18 ವರ್ಷದ ಒಳಗಿನ ವಯೋಮಿತಿಯ 5 ಕಿ.ಮೀ ರೋಡ್ ರೇಸ್ ನಲ್ಲಿ ಡಾ.ಎನ್ಎಸ್ಎಎಂ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ಪಿಯು (ವಾಣಿಜ್ಯ) ವಿದ್ಯಾರ್ಥಿ ಗುರುರಾಜ್ ಚಿನ್ನದ ಪದಕ, ಡಾ.ಎನ್ಎಸ್ಎಎಂ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ರಕ್ಷಿತ್ ಬೆಳ್ಳಿ ಪದಕ ಹಾಗೂ ಡಾ.ಎನ್.ಎಸ್.ಎ.ಎಂ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಕಂಚಿನ ಪದಕ ಪಡೆದಿರುತ್ತಾರೆ ಎಂದು ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ