ಸವಾಲುಗಳನ್ನು ಎದುರಿಸಿದಾಗ ಸಾಧನೆ ಸಾಧ್ಯ: ಡಾ. ಕುಮಾರ ಹೆಗ್ಡೆ ಬಿ.ಎ

Upayuktha
0



ಉಜಿರೆ: ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಹೊಸ ಪ್ರಯೋಗಗಳಿಗೆ ಯಶಸ್ಸು ದೊರೆಯುತ್ತದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ ತಿಳಿಸಿದರು.


 

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಬಿ. ವೋಕ್‍ನ ರೀಟೈಲ್ ಆ್ಯಂಡ್ ಸಪ್ಲೈ ಮ್ಯಾನೇಜ್‍ಮೆಂಟ್ ವಿಭಾಗ ಮತ್ತು ಉದ್ಯಮಶೀಲ ಅಭಿವೃದ್ಧಿ ಕೋಶದ ಸಹಯೋಗದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.



ಸಮಾಜಕ್ಕೆ ಏನು ಬೇಕೆಂದು ಅರಿತು, ಸಾಧ್ಯತೆಗಳನ್ನು ಎದುರಿಸಿದಾಗ ಮಾತ್ರ ಸಾಧನೆ ಮಾಡಬಹುದು. ಹೊಸತುಗಳು ಯಶಸ್ಸು ಕಾಣುವುದೇ ಸವಾಲುಗಳಿಂದ. ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಿದರೆ ಮಾತ್ರ ಅಸ್ತಿತ್ವ ಉಳಿಯಲು ಸಾಧ್ಯ. ವಿಭಿನ್ನ ಸಾಧ್ಯತೆಗಳನ್ನು ಅವಲೋಕಿಸಿ ಉದ್ಯಮಕ್ಕೆ ಕಾಲಿಟ್ಟರೆ ಗುರಿ ಮುಟ್ಟಬಹುದು ಎಂದರು.




ಉದ್ಯಮಿ ಮೋನಿಕಾ ಕಾರ್ಯಕ್ರಮ ಉದ್ಘಾಟಿಸಿ, ಉದ್ಯಮಿಯಾಗಲು ಎಲ್ಲರಿಗೂ ಅವಕಾಶವಿರುವುದಿಲ್ಲ. ಆದ್ದರಿಂದ ಅವಕಾಶಗಳು ಬಂದಾಗ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಬೇಕು. ಬುದ್ಧಿವಂತಿಕೆಯಿಂದ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತರಬೇಕು ಎಂದು ನುಡಿದರು.




ಕಾರ್ಯಕ್ರಮದಲ್ಲಿ ಬಿ. ವೋಕ್ ವಿಭಾಗದ ಸಂಯೋಜಕ ಸುವೀರ್ ಜೈನ್, ವಿಭಾಗದ ಮುಖ್ಯಸ್ಥ ಅಶ್ವಿತ್ ಎಚ್.ಆರ್, ಉದ್ಯಮಶೀಲ ಅಭಿವೃದ್ಧಿ ಕೋಶದ ಸಂಯೋಜಕರಾದ ಸ್ವಾತಿ ಬಿ ಮತ್ತು ಸುಮನ್ ಜೈನ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನಸ ಕಾರ್ಯಕ್ರಮ ನಿರೂಪಿಸಿ, ಕೀರ್ತನಾ ಸ್ವಾಗತಿಸಿ, ಸಿಂಚನಾ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top