ಮಂಗಳೂರು: ಭಾರತೀಯ ಸಂಸ್ಕøತಿ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಆಚರಿಸುವ ದೀಪಾವಳಿಯ ಅಂಗವಾಗಿ ನೆಕ್ಸಸ್ ಮಾಲ್‍ನ ಫಿಝಾ, ಈ ತಿಂಗಳ 18 ಮತ್ತು 19ರಂದು ವೈವಿಧ್ಯಮಯ ಸಾಂಸ್ಕøತಿಕ ಹಬ್ಬ ಹಮ್ಮಿಕೊಂಡಿದೆ.
ದೃಶ್ಯ ಕಲೆ ಮತ್ತು ಸಂಗೀತದ ವಿಶಿಷ್ಟ ಕಾರ್ಯಕ್ರಮವನ್ನು ಗ್ರಾಹಕರಿಗಾಗಿ ಆಯೋಜಿಸಿದ್ದು, ನೆಕ್ಸಸ್ ಮಾಲ್‍ನ ಓಪನ್ ಪ್ಲಾಜಾದಲ್ಲಿ 18ರಂದು ಖ್ಯಾತ ವ್ಯಕ್ತಿಚಿತ್ರ ಕಲಾವಿದ ಮೊಹ್ಮದ್ ಇಲ್ಯಾಸ್ ಗಾಯನದ ಜತೆಗೆ ಭಾವಚಿತ್ರಗಳನ್ನು ರಚಿಸುವರು. ಮರುದಿನ ಭಾರ್ಗವಿ ನೃತ್ಯ ತಂಡದ ಅತ್ಯದ್ಭುತ ಪ್ರದರ್ಶನ ಇರಲಿದೆ ಎಂದು ಪ್ರಕಟಣೆ ಹೇಳಿದೆ.
ಪುರುಷ ಮತ್ತು ಮಹಿಳಾ ಧ್ವನಿಗಳಲ್ಲಿ ಹಾಡನ್ನು ಹಾಡುವ ಮೂಲಕ ಮನೆ ಮಾತಾಗಿರುವ ಚಂದ್ರಕಾಂತ್ ಅವರ ಕಂಠದಿಂದ ಹಲವಾರು ಹಾಡುಗಳು ಕೂಡಾ ಮೂಡಿಬರಲಿವೆ. ಅವರ ಈ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ. ಅವರ ಸುಮಧುರ ಧ್ವನಿಯು ಈ ದೀಪಾವಳಿ ಆಚರಣೆಗಳಿಗೆ ಇನ್ನೂ ಹೆಚ್ಚಿನ ವಿನೋದವನ್ನು ನೀಡುತ್ತದೆ. ಅಂತೆಯೇ ಈ ತಿಂಗಳ 26ರಂದು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ