ಮಂಗಳೂರು: ಮಾಂಡೋವಿ ಮೋಟರ್ಸ್ ಲಿಮಿಟೆಡ್ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಾಗೂ ಕನ್ನಡ ಭಾಷೆ ಬೆಳವಣಿಗೆಗೆ ತಮ್ಮ ಸೇವೆಯನ್ನು ಧಾರೆ ಎರೆದ ಗಣ್ಯರಿಗೆ ನ.18 ಶನಿವಾರದಂದು ಸಂಜೆ 4 ಗಂಟೆಗೆ ಮಾಂಡೋವಿ ಮೋಟರ್ಸ್ ಶೋರೂಮ್ ಹಂಪನಕಟ್ಟೆ ಮಂಗಳೂರಿನಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ.
ಶ್ರೀ ಹರೇಕಳ ಹಾಜಬ್ಬ, ಪದ್ಮಶ್ರೀ ಪುರಸ್ಕøತ, ಪ್ರಾಥಮಿಕ ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಶ್ರಮಿಸಿದವರು. ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಭಾಗವತರು, ಶ್ರೀ ಧರ್ಮಸ್ಥಳ ಯಕ್ಷಗಾನ ಮೇಳ, ಗಡಿನಾಡಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವವರು. ಶ್ರೀ ಶಾಂತಪ್ಪ, ಸಂಚಾರಿ ಪೊಲೀಸ್ ಇಲಾಖೆಯಲ್ಲಿದ್ದು ಕನ್ನಡದಲ್ಲಿ ಸಂಚಾರ ನಿಯಮಾವಳಿಗಳ ಪುಸ್ತಕ ಲೇಖಕರು. ಶ್ರೀ ರವೀಂದ್ರನಾಥ್ ನಾಯ್ಕ್ ಎಮ್ ಆರ್ ಪಿ ಎಲ್ ಕಂಪೆನಿಯಲ್ಲಿದ್ದು ಕನ್ನಡ ಕವಿತೆ ಸಂಕಲನ ಲೇಖಕರು ಇವರುಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ