|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವಲ್ಲಿ ವಸ್ತು ಪ್ರದರ್ಶನ ಬಹುಮುಖ್ಯ : ಮಂಜುನಾಥ ಸ್ವಾಮಿ

ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವಲ್ಲಿ ವಸ್ತು ಪ್ರದರ್ಶನ ಬಹುಮುಖ್ಯ : ಮಂಜುನಾಥ ಸ್ವಾಮಿ



ಶಿವಮೊಗ್ಗ : ಸಾಂದೀಪನಿ ಆಂಗ್ಲ ಶಾಲೆಯಲ್ಲಿ ನಡೆದ ವಿಜ್ಞಾನ, ಕಲೆ, ಭಾಷೆ, ಕ್ರೀಡಾ ವಸ್ತು ಪ್ರದರ್ಶನವನ್ನು ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ ಉದ್ಘಾಟಿಸಿ ಮಾತನಾಡಿದರು. ಸಾಂದೀಪನಿ ಶಾಲೆ ಶೈಕ್ಷಣಿಕ ಗುಣಮಟ್ಟ ನೀಡುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಇರುವ ಸೃಜನಶೀಲತೆಯನ್ನು ಹೊರಹಾಕುವ ಹಲವಾರು ಚಟುವಟಿಕೆಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತದೆ ಎಂಬುದು ಸಂತೋಷದ ವಿಷಯ ಎಂದು ತಿಳಿಸಿದರು.



 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೇಡಿಯೋ ಶಿವಮೊಗ್ಗ 90.8FM ನ ಕಾರ್ಯಕ್ರಮ ನಿರ್ವಾಹಕ ಮತ್ತು ರಂಗಕರ್ಮಿ ಅಜೇಯ ಸಿಂಹ ಮಾತನಾಡಿ ಮಕ್ಕಳಲ್ಲಿ ಈ ರೀತಿಯ ಆಲೋಚನೆಯನ್ನು ಹೆಚ್ಚಿಸುವಲ್ಲಿ, ಅವರನ್ನು ಪಾಲ್ಗೊಳ್ಳುವಂತೆ ಮಾಡುವಲ್ಲಿ ಈ ರೀತಿಯ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯ ತಿಳಿಸಿದರು ಮತ್ತು ರಂಗಭೂಮಿ ಕಲಾವಿದ ಪ್ರತೀಕ್ ಸಿ.ಎಂ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


 

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರ್, ಮುಖ್ಯೋಪಾಧ್ಯಾಯರಾದ ಶ್ರೀನಿವಾಸ ವರ್ಮ ಅವರು ಉಪಸ್ಥಿತರಿದ್ದರು. ವಿಜ್ಞಾನ, ಕಲಾ, ಭಾಷಾ, ಕಂಪ್ಯೂಟರ್ ವಿಜ್ಞಾನ ಮತ್ತು ಕ್ರೀಡೆಗೆ ಸಂಬಂಧಿಸಿದಂತೆ ವಿವಿಧ ವಿಭಾಗಗಳಲ್ಲಿ ಅನೇಕ ಮಾದರಿಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳು ಭಾಗವಹಿಸಿದ್ದರು. ವಿಜ್ಞಾನ ವಿಭಾಗದಲ್ಲಿ ಶಾಲೆಯಲ್ಲಿ ಓದಿದ್ದ ಹಿರಿಯ ವಿದ್ಯಾರ್ಥಿಗಳೇ ತೀರ್ಪುಗಾರರಾಗಿ ಆಗಮಿಸಿದ್ದು ವಿಶೇಷವಾಗಿತ್ತು.



ಪೋಷಕರು, ಸಾರ್ವಜನಿಕರು ಮಕ್ಕಳ ವಿವಿಧ ಮಾದರಿಗಳನ್ನು ವೀಕ್ಷಿಸಿದರು, ಮಕ್ಕಳು ತಾವು ಮಾಡಿದ್ದ ಮಾದರಿಗಳ ಬಗ್ಗೆ ವಿವರಿಸುತ್ತಿದ್ದ ರೀತಿ ಆಕರ್ಷಕವಾಗಿತ್ತು. ಪ್ರತೀ ವಿಭಾಗದಲ್ಲಿ ಪ್ರತ್ಯೇಕ ಬಹುಮಾನವನ್ನು ನೀಡುವುದಾಗಿ ತಿಳಿಸಿದ್ದರಿಂದ ಎಲ್ಲಾ ಮಾದರಿಗಳು ಆಕರ್ಷಕವಾಗಿದ್ದವು‌.



ಅನೇಕ ಕ್ರೀಡಾಂಗಣಗಳು, ಕಂಪ್ಯೂಟರ್ ಕಾರ್ಯ ವಿಧಾನಗಳು, ಕುವೆಂಪುರವರ ಮನೆ, ಜ್ಞಾನಪೀಠ ಪುರಸ್ಕೃತರು, ಕನ್ನಡ ಭಾಷೆ ಬೆಳೆದು ಬಂದ ಹಾದಿ, ರಾಮಮಂದಿರ, ಕೇದಾರನಾಥ ದೇವಸ್ಥಾನ, ಸಂಸತ್ ಭವನ, ಸ್ವಯಂ ಚಾಲಿತ ವಾಹನ, ಗಣಿತದ ವಿಶೇಷತೆ, ರಾಮಾನುಜನ್ ಅವರ ಬದುಕಿನ ಪರಿಚಯ ಹೀಗೆ ಹಲವಾರು ಮಾದರಿಗಳು ಆಕರ್ಷಕವಾಗಿದ್ದವು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter      

0 Comments

Post a Comment

Post a Comment (0)

Previous Post Next Post