- ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ
- ಸಿನಿ ತಾರೆಯರು, ಕ್ರಿಕೆಟ್ ದಿಗ್ಗಜಗಳು ಭಾಗಿ
ಮಂಗಳೂರು: ವಿಶ್ವ ಬಂಟರ ಸಮ್ಮೇಳನಕ್ಕೆ ಕೃಷ್ಣನ ನಗರಿ ಉಡುಪಿ ಸಜ್ಜಾಗಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಉಡುಪಿಯಲ್ಲಿ ಅ.28 ಮತ್ತು 29ರಂದು ಎರಡು ದಿನಗಳ ಕಾಲ ವಿಶ್ವ ಬಂಟರ ಸಮ್ಮೇಳನ ಅದ್ದೂರಿಯಾಗಿ ಜರಗಲಿದೆ.
28ರಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ವಿಶ್ವ ಬಂಟರ ಕ್ರೀಡಾಕೂಟ ಹಾಗೂ 29ರಂದು ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದಲ್ಲಿ ಹಾಕಲಾದ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಉದ್ಘಾಟನೆಗೊಳ್ಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ.
ಪುತ್ತಿಗೆ ಮಠಾಧೀಶರಾದ ಶ್ರೀ ಸುಗೇಣೇಂದ್ರ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಗುರುದೇವದತ್ತ ಸಂಸ್ಥಾನ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಬಾರ್ಕೂರಿನ ಭಾರ್ಗವ ಮಹಾಸಂಸ್ಥಾನದ ಶ್ರೀ ಡಾ. ವಿಶ್ವಸಂತೋಷ ಭಾರತೀ ಶ್ರೀಪಾದರು, ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ ಅವರ ಪಾಲ್ಗೊಳ್ಳುವಿಕೆಯೊಂದಿಗೆ ಸಾಲಂಕೃತ ಮೆರವಣಿಗೆ ನಡೆಯಲಿದೆ.
ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಅವರು ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಮುಂಬಯಿಯ ಉದ್ಯಮಿ ಹೇರಂಭ ಇಂಡಸ್ಟ್ರೀಸ್‌ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಂಬಯಿಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಸಿಎಂಡಿ ತೋನ್ಸೆ ಆನಂದ ಎಂ ಶೆಟ್ಟಿ ಮತ್ತು ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ.
ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಎಂಆರ್‌ಜಿ ಗ್ರೂಪ್ ತ್ರಿಶೂಲ್ ಬಿಲ್ಡರ್ಸ್ & ಇನ್‌ಫ್ರಾಸ್ಟ್ರಕ್ಚರ್ ಪ್ರೈ ಲಿ. ಬೆಂಗಳೂರು ಇದರ ಸಿಎಂಡಿ ಕೆ. ಪ್ರಕಾಶ್ ಶೆಟ್ಟಿ, ಬರೋಡಾ ಗುಜರಾತ್‌ನ ಶಶಿ ಕ್ಯಾಟರಿಂಗ್ ಸರ್ವಿಸಸ್‌ನ ಶಶಿಧರ ಶೆಟ್ಟಿ ಬರೋಡಾ, ರಾಕ್ಷಿ ಡೆವಲಪರ್ಸ್ ಮುಂಬಯಿಯ ಸಿಎಂಡಿ ರಾಜೇಶ್ ಶೆಟ್ಟಿ, ಮಾಜಿ ಸಚಿವ ಬಿ. ರಮಾನಾಥ ರೈ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ನಿಕಟಪೂರ್ವ ಕಾರ್ಯದರ್ಶಿ ಡಾ. ಪಿ. ವಿ. ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುನಿಯಾಲ್ ಉದಯಕುಮಾರ್ ಶೆಟ್ಟಿ ಮತ್ತು ಮೈಸೂರಿನ ಉದ್ಯಮಿ ನಂದ್ಯಪ್ಪ ಶೆಟ್ಟಿ ಅವರ ಗೌರವ ಉಪಸ್ಥಿತಿ ಇರಲಿದೆ.
ವಿಶ್ವ ಬಂಟರ ಕ್ರೀಡಾಕೂಟದಲ್ಲಿ ವಿಶ್ವ ಬಂಟರ ಸಂಘಗಳ ತಂಡಗಳು ಭಾಗವಹಿಸಲಿವೆ. ಸಿನಿ ತಾರೆಯರಾದ ಸುನೀಲ್ ಶೆಟ್ಟಿ, ಐಶ್ವರ್ಯ ರೈ ಬಚ್ಚನ್, ಶಿಲ್ಪಾ ಶೆಟ್ಟಿ ಕುಂದ್ರಾ, ಗುರುಕಿರಣ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ಶಿವಧ್ವಜ್ ಶೆಟ್ಟಿ, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ರಿಷಭ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ರೂಪೇಶ್ ಶೆಟ್ಟಿ, ಯಶ್, ರಕ್ಷಿತಾ ಶೆಟ್ಟಿ ಅವರ ಕಲರವ ಸಮಾರಂಭದ ಸಂಭ್ರಮ ಹೆಚ್ಚಿಸಲಿದೆ.
ಕ್ರೀಡಾಕೂಟದ ಸಮಾರೋಪ ಸಮಾರಂಭವು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ. ಅಜಿತ್ ಕುಮಾರ್ ರೈ ಮಾಲಾಡಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎನ್. ವಿನಯ್ ಹೆಗ್ಡೆ ಪಾಲ್ಗೊಳ್ಳುತ್ತಾರೆ. ಯುಎಇ ಉದ್ಯಮಿ ಸರ್ವೋತ್ತಮ ಶೆಟ್ಟಿ ಹಾಗೂ ವಿಶ್ವದ ಎಲ್ಲಾ ಬಂಟರ ಸಂಘಗಳ ಅಧ್ಯಕ್ಷರುಗಳು ಗೌರವ ಉಪಸ್ಥಿತರಿರುತ್ತಾರೆ.
ಸಮ್ಮೇಳನದಲ್ಲಿ ಮಂಗಳೂರಿನ ಡಾ. ಎ. ಸದಾನಂದ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಉದ್ಯಮಿ ಕೆ. ಪ್ರಕಾಶ್ ಶೆಟ್ಟಿ, ಮುಂಬೈನ ಚಂದ್ರಹಾಸ ಕೆ. ಶೆಟ್ಟಿ, ದುಬೈನ ಪ್ರವೀಣ್ ಶೆಟ್ಟಿ ವಕ್ವಾಡಿ, ಖ್ಯಾತ ಭಾಗವತರಾದ ಯಕ್ಷಧ್ರುವ ಸತೀಶ್ ಶೆಟ್ಟಿ ಪಟ್ಲ, ಪುಣೆಯ ಸಂತೋಷ್ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ಮುಂಬೈನ ಚಿರಾಗ್ ಶೆಟ್ಟಿ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು.
ಅ.29ರಂದು ಭಾನುವಾರ ನಡೆಯುವ ವಿಶ್ವ ಬಂಟರ ಸಾಂಸ್ಕೃತಿಕ ವೈಭವವನ್ನು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪರು ಹಾಗೂ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಗೃಹಸಚಿವ ಡಾ. ಜಿ. ಪರಮೇಶ್ವರ್ ಭಾಗವಹಿಸುತ್ತಾರೆ. ಐಕಳ ಹರೀಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ವಿಚಾರಗೋಷ್ಠಿ:
ನಂತರ ಸ್ಥಿತ್ಯಂತರದಲ್ಲಿ ಬಂಟರು: ಶಿಕ್ಷಣ ಮತ್ತು ಉದ್ಯೋಗ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಮುಂಬೈನ ವಿಶ್ವಾತ್ ಕೆಮಿಕಲ್ಸ್ ಲಿ ಸಿಎಂಡಿ ಬಿ. ವಿವೇಕ ಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಮುಂಬಯಿನ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಸಿಎಂಡಿ ಆನಂದ ಎಂ ಶೆಟ್ಟಿ ತೋನ್ಸೆ, ಆದಾನಿ ಗ್ರೂಪ್‌ನ ದಕ್ಷಿಣ ಭಾರತ ಉಪಾಧ್ಯಕ್ಷ ಕಿಶೋರ್ ಆಳ್ವ, ಪಡುಬಿದ್ರಿಯ ಆಸ್ಪೆನ್ ಎಸ್‌ಇಝಡ್ ಸೀನಿಯರ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ, ಮುಂಬಯಿ ಇಸ್ಸಾರ್ ಫೈನಾನ್ಸಿಯಲ್ ಸರ್ವೀಸಸ್‌ನ ಸಿಎಂಡಿ ಡಾ. ಆರ್.ಕೆ ಶೆಟ್ಟಿ, ಬೆಂಗಳೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ ಜಪ್ತಿ, ಮುಂಬಯಿ ವಿವಿಯ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ವಿಶ್ವ ಬಂಟರ ಸಾಂಸ್ಕೃತಿಕ ವೈಭವವನ್ನು ಬಂಟರ ವಾಹಿನಿ ಸಂಪಾದಕ ಪ್ರದೀಪ್ ಕುಮಾರ್ ರೈ ಐಕಳ ಬಾವ, ಹೋಟೆಲ್ ಉದ್ಯಮಿ ಪುರುಷೋತ್ತಮ ಭಂಡಾರಿ ನಿರ್ವಹಿಸಲಿದ್ದಾರೆ. ಟೈಮ್ಸ್ ಗ್ರೂಪ್ ಪ್ರಸರಣ ವಿಭಾಗದ ನಿವೃತ್ತ ಪ್ರಬಂಧಕ ನವನೀತ ಶೆಟ್ಟಿ ಕದ್ರಿ ಸಮನ್ವಯಕಾರರಾಗಿ, ಕೆಯುಡಬ್ಲ್ಯುಜೆ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ವಂದನಾರ್ಪಣೆಯಲ್ಲಿ ಸಹಯೋಗ ನೀಡಲಿದ್ದಾರೆ.
ಕರ್ನಾಟಕ ಜಾನಪದ- ಯಕ್ಷಗಾನ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಆಶಯ ಭಾಷಣ ಮಾಡುವರು.
ವಿಚಾರ ಸಂಕಿರಣ: ಸ್ಥಿತ್ಯಂತರದಲ್ಲಿ ಬಂಟರು
ಸಮಾಜದ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಪೂರ್ವಾಹ್ಣ ಗಂ.11:30ಕ್ಕೆ ನಡೆಯುವ 'ಸ್ಥಿತ್ಯಂತರದಲ್ಲಿ ಬಂಟರು: ಶಿಕ್ಷಣ ಮತ್ತು ನಿರುದ್ಯೋಗ' ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಮುಂಬೈಯ ವಿಶ್ರಾತ್ ಕೆಮಿಕಲ್ಸ್ ಲಿ. ಸಿಎಂಡಿ ವಿವೇಕ್ ಶೆಟ್ಟಿ ವಹಿಸುವರು.
ಆನಂದ ಎಂ. ಶೆಟ್ಟಿ ತೋನ್ಸೆ, ಕಿಶೋರ್ ಆಳ್ವ, ಅಶೋಕ್ ಕುಮಾರ್ ಶೆಟ್ಟಿ, ಡಾ.ಆರ್.ಕೆ.ಶೆಟ್ಟಿ, ಉಪೇಂದ್ರ ಶೆಟ್ಟಿ, ಡಾ.ಪೂರ್ಣಿಮಾ ಎಸ್.ಶೆಟ್ಟಿ, ಪ್ರದೀಪ್ ಕುಮಾರ್ ಐಕಳಬಾವ, ಪುರುಷೋತ್ತಮ ಭಂಡಾರಿ ಅಡ್ಯಾರ್ ವಿಷಯದ ಕುರಿತಾಗಿ ಮಾತನಾಡುವರು. ಕದ್ರಿ ನವನೀತ್ ಶೆಟ್ಟಿ ಗೋಷ್ಠಿಯ ಸಮನ್ವಯಕಾರರಾಗಿರುವರು.
ಕವಿ ಸಮಯ, ಕಾವ್ಯ ನಮನ- ಚಿತ್ತ ಚಿತ್ತಾರ:
ಅಪರಾಹ್ನ ಗಂಟೆ 2:30 ರಿಂದ ಜರಗುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಿ - ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ವಹಿಸುವರು. ಮೂರು ವಿಭಾಗಗಳಲ್ಲಿ ನಡೆಯುವ ಕವಿ 'ಸಮಯ - ಕಾವ್ಯ ನಮನ - ಚಿತ್ತಚಿತ್ತಾರ' ಕಾರ್ಯಕ್ರಮದಲ್ಲಿ ಕವಿಗಳಾದ ಡಾ.ತೋನ್ಸೆ ವಿಜಯಕುಮಾರ್ ಶೆಟ್ಟಿ, ಅಶೋಕ್ ಪಕ್ಕಳ, ನಾರಾಯಣ ರೈ ಕುಕ್ಕುವಳ್ಳಿ, ಹರೀಶ್ ಸುಲಾಯ ಒಡ್ಡಂಬೆಟ್ಟು, ರೂಪಕಲಾ ಆಳ್ವ, ವಿಜಯಾ ಶೆಟ್ಟಿ ಸಾಲೆತ್ತೂರು, ಡಾ.ಮಂಜುಳಾ ಶೆಟ್ಟಿ, ಮಲ್ಲಿಕಾ ಜೆ. ರೈ ಪುತ್ತೂರು, ಪ್ರೊ.ಅಕ್ಷಯ ಆರ್. ಶೆಟ್ಟಿ ಪೆರಾರ ಸ್ವರಚಿತ ಕನ್ನಡ - ತುಳು ಕವಿತೆಗಳನ್ನು ಓದುವರು.
ಗಾಯಕರಾದ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು, ಬಬಿತಾ ಶೆಟ್ಟಿ ಮತ್ತು ವರ್ಷಾ ಶೆಟ್ಟಿ ಗೋಷ್ಠಿಯ ಕವಿತೆಗಳನ್ನು ಸ್ವರಬದ್ಧಗೊಳಿಸಿ ಹಾಡುವರು. ಇದೇ ಸಂದರ್ಭದಲ್ಲಿ ಕುಂಚ ಕಲಾವಿದೆ ಆಶ್ರಿತಾ ರೈ ಕವಿತೆಗಳ ಭಾವವನ್ನು ಗ್ರಹಿಸಿ ಚಿತ್ರ ಬರೆಯುವರು. ಡಾ.ಪ್ರಿಯಾ ಶೆಟ್ಟಿ ನಿರೂಪಿಸುವರು. ಖ್ಯಾತ ಹಿನ್ನೆಲೆ ಕಲಾವಿದರು ಸಂಗೀತ ನೀಡಿ ಕಾರ್ಯಕ್ರಮವನ್ನು ರಂಜನೀಯಗೊಳಿಸುವರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ