ವಿಸ್ಮಯ ಜಗತ್ತು: ಹಾಡುವ ಮರಳು

Upayuktha
0

ಸಾಂದರ್ಭಿಕ ಚಿತ್ರ




ಹಾಡುವ ಮರಳು ಅಥವಾ ಶಿಳ್ಳೆ ಮರಳು ಎಂದು ಕರೆಯಲ್ಪಡುವ ಮರಳು ಧ್ವನಿಯನ್ನು ಉತ್ಪಾದಿಸುತ್ತದೆ. ದಿಬ್ಬಗಳ ಮೇಲೆ ಗಾಳಿಯು ಹಾದುಹೋಗುವುದರಿಂದ ಅಥವಾ ಮರಳಿನ ಮೇಲೆ ನಡೆಯುವುದರಿಂದ ಈ ಧ್ವನಿ ಹೊರಸೂಸುವಿಕೆ ಉಂಟಾಗಬಹುದು.



ಪ್ರಪಂಚದಾದ್ಯಂತದ ಕೆಲವು ಕಡಲತೀರಗಳಲ್ಲಿ, ಒಬ್ಬ ವ್ಯಕ್ತಿಯು ತನ್ನ ಪಾದಗಳನ್ನು ಸಾಕಷ್ಟು ಬಲದಿಂದ ಉಜ್ಜಿದರೆ ಅಥವಾ ಷಫಲ್ ಮಾಡಿದರೆ ಒಣ ಮರಳು ಹಾಡುವ, ಕೀರಲು ಧ್ವನಿಯಲ್ಲಿ, ಶಿಳ್ಳೆ ಅಥವಾ ಕಿರುಚುವ ಶಬ್ದವನ್ನು ಮಾಡುತ್ತದೆ. ಈವರೆಗೆ ಈ ವಿದ್ಯಮಾನವನ್ನು ವೈಜ್ಞಾನಿಕವಾಗಿ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಆದರೆ ಧಾನ್ಯಗಳು ಹೆಚ್ಚು ಗೋಳಾಕಾರದಲ್ಲಿದ್ದರೆ ಸ್ಫಟಿಕ ಮರಳು ಇದನ್ನು ಮಾಡುತ್ತದೆ ಎಂದು ಕಂಡುಬಂದಿದೆ. ಮರಳಿನ ಕಣಗಳು ಒಂದೇ ಗಾತ್ರದಲ್ಲಿರಬೇಕು ಎಂದು ಕೆಲವರು ನಂಬುತ್ತಾರೆ, ಆದ್ದರಿಂದ ಮರಳನ್ನು ಗಾಳಿ ಮತ್ತು ಅಲೆಗಳ ಕ್ರಿಯೆಗಳಿಂದ ಚೆನ್ನಾಗಿ ವಿಂಗಡಿಸಬೇಕು, ಧಾನ್ಯಗಳು ಗೋಳಾಕಾರಕ್ಕೆ ಹತ್ತಿರವಾಗಿರಬೇಕು ಮತ್ತು ಧೂಳು, ಮಾಲಿನ್ಯದಿಂದ ಮುಕ್ತವಾದ ಮೇಲ್ಮೈಗಳನ್ನು ಹೊಂದಿರಬೇಕು. ಮರಳಿನ ಧಾನ್ಯಗಳ ಮೇಲಿನ ಸಣ್ಣ ಪ್ರಮಾಣದ ಮಾಲಿನ್ಯವು ಮರಳನ್ನು ಮೌನಗೊಳಿಸಲು ಸಾಕಷ್ಟು ಘರ್ಷಣೆಯನ್ನು ಕಡಿಮೆ ಮಾಡುತ್ತದೆ.



ವೇಲ್ಸ್‌ನ ಉತ್ತರದಲ್ಲಿ ಮತ್ತು ಸ್ಕಾಟಿಷ್ ಹೆಬ್ರೈಡ್ಸ್‌ನ ಈಗ್ ಎಂಬ ಪುಟ್ಟ ದ್ವೀಪ ಸೇರಿದಂತೆ ಬ್ರಿಟಿಷ್ ದ್ವೀಪಗಳ 33 ಬೀಚ್‌ಗಳಲ್ಲಿ ಹಾಡುವ ಮರಳು ವರದಿಯಾಗಿದೆ. ಇದು ಉತ್ತರ ಅಮೆರಿಕಾದ ಅಟ್ಲಾಂಟಿಕ್ ಕರಾವಳಿಯ ಹಲವಾರು ಕಡಲತೀರಗಳಲ್ಲಿ ವರದಿಯಾಗಿದೆ. ಹಾಡುವ ಮರಳುಗಳನ್ನು ಸೌರಿಸ್‌ನಲ್ಲಿ, ಪ್ರಿನ್ಸ್ ಎಡ್ವರ್ಡ್ ದ್ವೀಪದ ಪೂರ್ವ ತುದಿಯಲ್ಲಿ, ಬೇಸಿನ್ ಹೆಡ್ ಪ್ರಾಂತೀಯ ಉದ್ಯಾನವನದ ಸಿಂಗಿಂಗ್ ಸ್ಯಾಂಡ್ಸ್ ಬೀಚ್‌ನಲ್ಲಿ ಕಾಣಬಹುದು.



ಸಿನಾಯ್ ಮರುಭೂಮಿಯಲ್ಲಿ ಮುಳುಗಿ ಹೋದ ಚರ್ಚ್ ಒಂದರಿಂದ ಈಗಲೂ ಗಂಟೆ ಸದ್ದು ಕೇಳುತ್ತದೆಂದೂ, ನೆಲದೊಳಗಿಂದ ಬರುವ ಈ ಸದ್ದಿಗೆ ಬೆದರಿ ಕಾರವಾನಿನ ಒಂಟೆಗಳೆಲ್ಲ ದಿಕ್ಕಾಪಾಲಾಗಿ ಚದುರಿ ಹೋದವೆಂದು ಅರಬ್ ಯಾತ್ರಿಕರು ಹೇಳಿದ್ದಾರೆ. ಸುಮಾರು 200 ವರ್ಷಗಳ ಹಿಂದೆ ಸಿನಾಯ್ ಬೆಟ್ಟಗಳಿಗೆ ಯಾತ್ರೆ ಹೋದ ಯುರೋಪಿಯನ್ ಯಾತ್ರಿಕರು ಬೆಟ್ಟಗಳಿಂದ ಬರುತ್ತಿದ್ದ ಚರ್ಚ್ ಗಂಟೆ ದನಿಯನ್ನು ಕೇಳಿ, ಅಲ್ಲಿ ಚರ್ಚ್ ಒಂದು ಹುದುಗಿ ಹೋಗಿದೆ ಎಂದು ಅಲ್ಲಿನ ಪೂಜಾರಿಗಳು ಈಗಲೂ ಗಂಟೆ ಬಾರಿಸುವುದು ಕೇಳುತ್ತದೆ ಎಂದು ಕತೆ ಹಬ್ಬಿಸಿದರು. 



ಈ ವಿವಾದವನ್ನು ಕೇಳಿಸಿಕೊಂಡಿದ್ದ ಸ್ಕಾಟ್ ಪ್ರಕೃತಿಶಾಸ್ತ್ರಜ್ಞ ಸರ್ ಡೇವಿಡ್ ಬ್ರೆವೆಸ್ಟರ್ ಸಿನಾಯ್ ಪರ್ವತಗಳಿಗೆ ಭೇಟಿ ಕೊಟ್ಟು ವಾಸ್ತವಾಂಶ ತಿಳಿಯಲು ಸಂಶೋಧನೆ ಆರಂಭಿಸಿದ. ೧೮೬೮ರಲ್ಲಿ ನಾಲ್ಕಾರು ಜನ ಸಹಾಯಕರೊಡನೆ ಆ ಸ್ಥಳಕ್ಕೆ ಭೇಟಿಕೊಟ್ಟ ಬ್ರೆವೆಸ್ಟರ್ ಗಂಟೆ ಬಾರಿಸುವ ಪರ್ವತಗಳ ಬಗ್ಗೆ "ಲೆಟರ್ ಆನ್ ನ್ಯಾಚುರಲ್ ಮ್ಯಾಜಿಕ್" ಪುಸ್ತಕದಲ್ಲಿ ಬರೆದಿದ್ದಾನೆ. ಬ್ರೆವೆಸ್ಟರ್ ತನ್ನೊಡನಿದ್ದ ಮಾರ್ಗದರ್ಶಿಯೊಬ್ಬನಿಗೆ ಆ ಗಂಟೆ ಬಾರಿಸುವ ಪರ್ವತದ ಶಿಖರವನ್ನೇರಲು ಹೇಳಿದ. ಆ ಮಾರ್ಗದರ್ಶಿ ಅರ್ಧ ಹತ್ತುವವರೆಗೂ ಏನೂ ಸದ್ದು ಕೇಳಲಿಲ್ಲ. ಆದರೆ ಅವನು ಅರ್ಧಕ್ಕಿಂತಲೂ ಕೊಂಚ ಮೇಲೆ ಹತ್ತಿರಬೇಕಾದರೆ ಅವನ ಕಾಲ್ತುಳಿತಕ್ಕೆ ಮರಳು ಕೊಂಚ ಜಾರಿ ಕೆಳಗಿಳಿಯತೊಡಗಿದಾಗ ಮೆಲ್ಲಗೆ ತಂತೀ ವಾದ್ಯವನ್ನು ಮೀಟಿದ ಸದ್ದು ಶುರುವಾಯ್ತು. ಮೇಲಿನಿಂದ ಕೆಳಗಿಳಿಯುತ್ತಿದ್ದ ಮರಳು ಇನ್ನೂ ಹೆಚ್ಚು ಹೆಚ್ಚು ಮರಳನ್ನು ತನ್ನೊಡನೆ ಜಾರಿಸಲು ಶುರು ಮಾಡುತ್ತಲೂ ತಂತಿಯ ಝೇಂಕಾರ ಗಟ್ಟಿಯಾಗುತ್ತಾ ಮರಳಿನ ಪಾತ ನೆಲ ಮುಟ್ಟುವಷ್ಟರಲ್ಲಿ ದೂರದ ಗುಡುಗಿನಷ್ಟು ಗಟ್ಟಿಯಾಗಿ ಕೇಳಿಸತೊಡಗಿತು. ಆ ಸದ್ದು ಸುತ್ತಮುತ್ತಲಿನ ಗ್ರಾನೈಟ್ ಬಂಡೆಗಳಿಂದೆಲ್ಲಾ ಪ್ರತಿಫಲಿಸಿ, ಆ ಕಂಪನಗಳಿಂದ ಬೇರೆಡೆಗಳಿಂದಲೂ ಮರಳು ಸುಶ್ರಾವ್ಯ ದನಿಗೈಯ್ಯುತ್ತಾ ಜರುಗಲು ಶುರುವಾಯ್ತು. ನಿಶಬ್ದ ವಾತಾವರಣದಲ್ಲಿ 30 ಗಜ ದೂರದಿಂದ ಸಹ ಇದನ್ನು ಕೇಳಬಹುದು.



ಮರಳುಗಾಡಿನಲ್ಲಿ ಕಾಡುವ ಸದ್ದು ಯಾವಾಗಲೂ ಬಹಳ ಕಡಿಮೆ ತರಂಗಾಂತರದಲ್ಲಿದ್ದು, ಘೋಷದಂತೆ ಇರುತ್ತದೆ. ಸಮುದ್ರ ತೀರದ ಮರಳಿನ ಸದ್ದು ಅತಿ ಹೆಚ್ಚು ತರಂಗಾಂತರ ಹೊಂದಿದ್ದು ತಾರರದ ಬಳಪ ಸೈಟಿನ ಮೇಲೆ ಗೀರಿದಾಗ ಆಗುವ ಕೀರಲು ಧ್ವನಿಯನ್ನು ಹೋಲುತ್ತದೆ. ಕೆಲವು ಮರಳುಗಳ ಸದ್ದು, ಮನುಷ್ಯನ ಹನಿಯನ್ನು ಹೋಲುತ್ತದೆ, ಕಲಹರಿ ಮರುಭೂಮಿಯಲ್ಲಿ ಒಂದುಕಡೆ ನಾವು ಕಾಲಿಟ್ಟ ಹಾಗೂ ಮರಳು ನಾಯಿ ಬೊಗಳಿದಂತೆ ಬೌ ಬೌ ಎಂದು ಬೊಗಳುತ್ತದೆ. ನ್ಯೂಕ್ಯಾಸಲ್ ವಿಜ್ಞಾನಿಗಳು ಮರುಭೂಮಿಯಲ್ಲಿ ಸಂಶೋಧನೆ ಮಾಡುವುದಲ್ಲದೆ ಪ್ರಯೋಗ ಶಾಲೆಯಲ್ಲಿ ಮರಳಿನಿಂದ ಸುಶ್ರಾವ್ಯ ದನಿ ಹೊಮ್ಮಿಸಲು ಸಾಧ್ಯವೇ ಎಂದು ಪ್ರಯತ್ನಿಸಿದ್ದಾರೆ. ಅವರ ಪ್ರಯೋಗಗಳಲ್ಲಿ ಮರಳಿನ ಕಣಗಳ ನುಣುಪಿಗಿಂತಲೂ ಮರಳು ರಾಶಿಯ ಕಣಗಳ ಸಮಾನ ಗಾತ್ರ ಅವು ಹಾಡಲು ಬಹು ಮುಖ್ಯ ಎಂದು ಕಂಡುಬಂದಿದೆ. ಅಲ್ಲದೆ ಮರಳು ರಾಶಿಯಲ್ಲಿ ಧೂಳಿನ ಕಣಗಳು ತುಂಬಾ ಇದ್ದರೆ ಅಥವಾ ಒದ್ದೆಯಾಗಿದ್ದರೆ ಆ ಮರಳು ಹಾಡುವ ಶಕ್ತಿ ಕಳಕೊಳ್ಳುತ್ತದೆ ಎಂದು ಪತ್ತೆ ಮಾಡಿದ್ದಾರೆ. ಮರಳು ಹಾಡಲು ಈ ಎಲ್ಲ ಅಂಶಗಳ ಜೊತೆಗೆ ಮರಳಿನಲ್ಲಿ ಎರಡು ವಿಶಿಷ್ಟ ಪದರಗಳಿರಬೇಕು, ಎಂದರೆ ಮರಳು ದಿಣ್ಣೆಯ ಮೇಲೆ ಚಿಕ್ಕ ಕಣಗಳ ಪದರ ಇದ್ದರೆ ಅಡಿಯಲ್ಲಿ ದಪ್ಪ ಕಣಗಳ ಪದರ, ಇಲ್ಲವೆ ಅಡಿಯಲ್ಲಿ ಒಂದು ಜಾತಿಯ ಕಲ್ಲು ಹುಡಿಗಳ ಮರಳಿದ್ದರೆ ಮೇಲೆ ಇನ್ನೊಂದು, ಈ ರೀತಿ ವಿಶಿಷ್ಟ ಪದರವಾಗಿ ವಿಭಜನೆಗೊಂಡ ರಾಶಿಯಿಂದ ಮಾತ್ರ ಸಂಗೀತ ಹೊಮ್ಮುತ್ತದೆಂದು ಸಂಶೋಧಿಸಿದ್ದಾರೆ.


- ಧೀರಜ್ ಕೃಷ್ಣ, ವಿಸಿ ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top