ವೆಂಕಟ್ರಮಣ ಭಟ್ ಮತ್ತು ಪದ್ಮನಾಭ ಭಟ್ಟರಿಗೆ ಗೌರವ ಸಮ್ಮಾನ
ಬೆಳ್ಳಾರೆ: ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಚೂಂತಾರು ಅವರ ಸ್ಮರಣಾರ್ಥ ವೈದಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಅವರ ಪುಣ್ಯತಿಥಿಯ ದಿನವಾದ ಅ. 3ರಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಆಶ್ರಯದಲ್ಲಿ ಚೂಂತಾರು ಉಪಾಸನಾದಲ್ಲಿ ನಡೆಯಿತು. ಪ್ರಥಮ ವರ್ಷದ ಪುರಸ್ಕಾರವನ್ನು ಕೊಳ್ತಿಗೆ ಗ್ರಾಮದ ಚೌರ್ಕಾಡು ಮನೆತನದವರಾದ ದರ್ಭೆ ವೆಂಕಟ್ರಮಣ ಭಟ್ ಮತ್ತು ಐವರ್ನಾಡು ದೇವಸ್ಥಾನದ ಅರ್ಚಕರಾದ ಪರಕ್ಕಜೆ ಮೂಲದ ಪದ್ಮನಾಭ ಭಟ್‌ರಿಗೆ ನೀಡಲಾಯಿತು.
ಪ್ರಶಸ್ತಿಯನ್ನು ರೂ. 5000/- ಮೊತ್ತದೊಂದಿಗೆ, ಸನ್ಮಾನಪತ್ರವನ್ನು ನೀಡಲಾಯಿತು. ನೀರಬಿದಿರೆ ಶಂಕರ ಭಟ್ ಸನ್ಮಾನ ನೆರವೇರಿಸಿದರು. ಮಾಧವ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಮಹೇಶ್ ಭಟ್ ಚೂಂತಾರು, ಡಾ. ಮುರಲಿ ಮೋಹನ್ ಚೂಂತಾರು, ನಾಕೇಶ ಚೂಂತಾರು, ದಿ. ಚೂಂತಾರು ಲಕ್ಷ್ಮೀನಾರಾಯಣ ಭಟ್ಟರ ಸೊಸೆಯಂದಿರಾದ ಶ್ರೀಮತಿ ಗಂಗಾಲಕ್ಷ್ಮೀ, ಡಾ. ರಾಜಶ್ರೀ ಮೋಹನ್, ಪುತ್ರಿ ಶ್ರೀಮತಿ ಗೀತಾ, ಹಿರಿಯರಾದ ಆನೆಕಾರ ಗಣಪಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸನ್ಮಾನ ಸಮಿತಿ ಸಂಚಾಲಕರಾದ ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೂಂತಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಚೊಕ್ಕಾಡಿ ಶ್ರೀರಾಮ ದೇವಾಲಯಕ್ಕೆ ರೂ. 1 ಲಕ್ಷ ಮತ್ತು ಇತರ ಸಂಘ ಸಂಸ್ಥೆಗಳಿಗೆ ರೂ. 10 ಸಾವಿರ ದೇಣಿಗೆ ನೀಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ