ಉಡುಪಿ: ಉಡುಪಿಯ ಲೋಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆಯ ವತಿಯಿಂದ ಜಾಗತಿಕ ಸಹಾನುಭೂತಿ ಮತ್ತು ಉಪಶಾಮಕ ಆರೈಕೆ ದಿನಾಚರಣೆ ಕಾರ್ಯಕ್ರಮ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಸ್ಪತ್ರೆಯ ಉಪಶಾಮಕ ಆರೈಕೆ ಕೇಂದ್ರ ವಾತ್ಸಲ್ಯ ಘಟಕದ ವಠಾರದಲ್ಲಿ ನಡೆಯಿತು.
ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, ಲಯನ್ಸ್ ಕ್ಲಬ್ ಉಡುಪಿ- ಚೇತನ ಅಧ್ಯಕ್ಷ ಜಗದೀಶ್ ಆಚಾರ್ಯ, ಉದ್ಯಮಿ ಮಧುಸೂದನ್ ಹೇರೂರು ಮಾತನಾಡಿದರು. ಈ ಸಂದರ್ಭದಲ್ಲಿ ವಾತ್ಸಲ್ಯ ಘಟಕಕ್ಕೆ ಉಪಯುಕ್ತ ಪರಿಕರಗಳನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಜಯಂಟ್ಸ್ ಬ್ರಹ್ಮಾವರ ಅಧ್ಯಕ್ಷ ವಿವೇಕಾನಂದ ಕಾಮತ್, ಕಾರ್ಯದರ್ಶಿ ಮಿಲ್ಟನ್ ಒಲಿವೇರಾ, ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಗಣೇಶ್ ಕಾಮತ್, ರಾಘವೇಂದ್ರ ಕರ್ವಾಲು, ಉಪಸ್ಥಿತರಿದ್ದರು. ಹೇಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ಘಟಕದ ಮುಖ್ಯಸ್ಥ ರೋಹಿ ರತ್ನಾಕರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ