ವ್ಯಕ್ತಿತ್ವ ವಿಕಸನ, ರಾಷ್ಟ್ರೀಯ ಗುಣ ನಿರ್ಮಾಣಕ್ಕೆ ಎನ್ನೆಸ್ಸೆಸ್ ಶಿಬಿರ ಒಂದು ಮೈಲಿಗಲ್ಲು: ಯಶ್‍ಪಾಲ್ ಸುವರ್ಣ

Upayuktha
0


ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀ ವಿದ್ಯಾಸಮುದ್ರ ತೀರ್ಥ ಪ್ರೌಢಶಾಲೆ ಕಿದಿಯೂರಿನಲ್ಲಿ ನಡೆದ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರ ಏಳು ದಿನಗಳ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ಯಶ್‍ಪಾಲ್ ಸುವರ್ಣ, ಮಾನ್ಯ ಶಾಸಕರು “ವಿದ್ಯಾರ್ಥಿಗಳು ಜೀವನಕಲೆ, ಒಂದಾಗಿ ಬಾಳುವ ಗುಣ, ಸಮಾಜ ಸೇವೆ ಮತ್ತು ರಾಷ್ಟ್ರಭಕ್ತಿಯೇ ಮೊದಲಾದ ಗುಣಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕು. ಇಂಥಎನ್.ಎಸ್.ಎಸ್. ಶಿಬಿರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವ ವಿಕಸನ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮ ಉದ್ಘಾಟಿಸಿದ ಉದಯಕುಮಾರ್ ಶೆಟ್ಟಿ, ಕಿದಿಯೂರು ಇವರು “ಇಂತಹ ಶಿಬಿರಗಳಿಂದಲೇ ನಾಯಕತ್ವ ಗುಣಗಳು ಬೆಳೆಯಲು ಸಾಧ್ಯ” ಎಂದು ಹೇಳಿದರು. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ನಿರುಪಮಾ ಪ್ರಸಾದ್ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿನಿಯರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಲು ಕರೆ ನೀಡಿದರು.


ಎನ್.ಎಸ್.ಎಸ್.ನ ಪ್ರಾಂತೀಯ ವಿಭಾಗಾಧಿಕಾರಿಗಳು, ಮಂಗಳೂರು ವಿಭಾಗದ ಸವಿತಾ ಎರ್ಮಾಳ್ ಶುಭ ಹಾರೈಸಿದರು. ಕಿದಿಯೂರು ಗ್ರಾಮಪಂಚಾಯತ್ ಸದಸ್ಯರಾದ ಉಷಾ ಶೆಟ್ಟಿ ಇವರು ಉಪಸ್ಥಿತರಿದ್ದರು ಹಾಗೂ ಕಾರ್ಯಕ್ರಮಕ್ಕೆ ಶುಭ ಕೋರಿದರು. 


ಕಿದಿಯೂರಿನ ಗಣ್ಯ ನಾಗರೀಕರಾದ ಗಿರೀಶ್ ನಿಸರ್ಗ ಸ್ಪೋರ್ಟ್ಸ್‌  ಕ್ಲಬ್ ಅಧ್ಯಕ್ಷರು, ಸುಜಯ್, ರಾಮದಾಸ್ ಉಪಸ್ಥಿತರಿದ್ದರು. ಯೋಗೀಶ್ ಕೋಟ್ಯಾನ್,ರಾಮಕೃಷ್ಣ ಕೆ., ಪ್ರೌಢಶಾಲೆಯ ಉಪಾಧ್ಯಾಯಿನಿ ಪೂರ್ಣಿಮಾ, ಬಾ.ಸ. ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಇಂದಿರಾ ಬಿ., ಬಾ.ಸ.ಪ.ಪೂ. ಕಾಲೇಜಿನ ಶಿಕ್ಷಣ ತಜ್ಞರಾದ ಶ್ರೀ ವಿಶ್ವನಾಥ ಬಾಯಿರಿ, ನಿವೃತ್ತ ಪ್ರಾಚಾರ್ಯರಾದ ಶ್ರೀಮತಿ ಹಂಸವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕಿಯರ ಸ.ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ. ಸುಮಾ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಸ್ವಾಗತ ಮತ್ತು ಪ್ರಸ್ತಾವಿಕ ನುಡಿಯನ್ನು ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾದ ಗಿರಿಜಾ ಹೆಗಡೆ ನೆರವೇರಿಸಿದರು. ದಯಾನಂದ್ ಡಿ. ಕಾರ್ಯಕ್ರಮವನ್ನು ನಿರೂಪಿಸಿ, ಛಾಯಾ ಶೆಟ್ಟಿ ವಂದಿಸಿದರು. ಎನ್.ಎಸ್.ಎಸ್. ನಾಯಕಿ ವಿಜೇತಾ ಮತ್ತು 50 ಸ್ವಯಂ ಸೇವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top