ಮಂಗಳೂರು: ಈ ತುಳುವ ಮಣ್ಣು ಅನಾಚೂನವಾಗಿ ಸತ್ವಭರಿತವಾಗಿಯೇ ನಮ್ಮನ್ನು ಬೆಳೆಸಿದೆ. ತೌಳವ ಮಕ್ಕಳಿಗೆ ತನ್ನೆದೆಯಲಿ ಬೆಚ್ಚಗಿನ ಸ್ಥಾನವನ್ನು ನೀಡಿ ಪಾಲಿಸುತ್ತಾ ಬಂದಿದೆ. ಹಾಗಾಗಿ ಇಲ್ಲಿನ ಆಟಗಳು ಇಂದಿಗೂ ಸಾಕ್ಷೀಭೂತವಾಗಿ ನಿಂತಿವೆ. ಇಂದು ತುಳುಕೂಟ ತನ್ನ ಸರಣಿ ಕಾರ್ಯಕ್ರಮಗಳಲ್ಲಿ ಸತ್ತ್ವಯುತ ಆಟಗಳನ್ನು ಆಡಿಸಿ ತನ್ನ ಮೌಲ್ಯಗಳನ್ನು ಪರಿಚಯಿಸಿದೆ ಎಂದು ದಿನೇಶ ಅಂಚನ್ ಗರೋಡಿ ಹೇಳಿದರು.
ಅವರು ಕಂಕನಾಡಿ ಗರೋಡಿಯ ಬಿಲ್ಲವ ಸಂಘದ ಅಧ್ಯಕ್ಷ ತುಳುಕೂಟ ಏರ್ಪಡಿಸಿದ ತುಳು ಆಟಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಗರೋಡಿಯಲ್ಲಿ ಮಾತನಾಡಿದರು.
ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಮಾತನಾಡಿ, ತುಳುಕೂಟ ತನ್ನ ಬಂಗಾರ್ ಪರ್ಬ ಸರಣಿಯಲ್ಲಿ ಭಿನ್ನ ಭಿನ್ನವಾದ ತುಳುವಿಗೆ ಸಂಬಂಧಪಟ್ಟಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಇಂದೂ ಕೂಡಾ ಮಹಿಳೆಯರಿಗಾಗಿ ಬೌದ್ಧಿಕ ಹಾಗೂ ಶಾರೀರಿಕ ಸಾಮಾರ್ಥ್ಯದ ಆಟಗಳಿಂದ ಅವರಲ್ಲೂ ಸದೃಢತೆಯ ಭಾವವನ್ನು ಮೂಡಿಸಿ ಅವರಿಗೂ ಸ್ವಾವಲಂಬಿತ್ವವನ್ನು ಕಲ್ಪಿಸಿದೆ ಎಂದು ನುಡಿದರು.
ಕಂಕನಾಡಿ ವಾರ್ಡ್ ನ ಮನಪಾ. ಸದಸ್ಯ ಸಂದೀಪ್ ಗರೋಡಿ, ಗರೋಡಿಯ ಮ್ಯಾನೇಜರ್ ಕಿಶೋರ್ ಕುಮಾರ್, ದಿ ರಕ್ಷಾ ಕನ್ಸಸ್ಟ್ರಕ್ಷನ್ ಮಾಲಕ ಉಮೇಶ ಸಾಲ್ಯಾನ್, ಕೂಟದ ಚಂದ್ರಶೇಖರ ಸುವರ್ಣ ಅತಿಥಿಗಳಾಗಿದ್ದರು. ಶ್ರೀಮತಿ ಹೇಮಾ ನಿಸರ್ಗ ಹಾಗೂ ದಿನೇಶ್ ಕುಂಪಲ ಸಭೆ ನಿರ್ವಹಿಸಿದರು. ಉಪಾಧ್ಯಕ್ಷ ಜೆ.ವಿ. ಶೆಟ್ಟಿ ಧನ್ಯವಾದವಿತ್ತರು. ಸುಜಾತಾ ಸುವರ್ಣ ಜೆಪ್ಪು ವಿಜೇತರ ಪಟ್ಟಿ ವಾಚನ ಮಾಡಿದರು.
ಸ್ಪರ್ಧಾ ವಿಜೇತರ ಪಟ್ಟಿ:
ಹೂಕಟ್ಟುವ ಸ್ಪರ್ಧೆ: ಮಂಜುಳಾ ಗರೋಡಿ ಪ್ರಥಮ
ಜಯಶ್ರೀ ನಾಗುರಿ: ದ್ವಿತೀಯ
ಧಾನ್ಯಗಳ ರಂಗೋಲಿ:
ಪ್ರಥಮ: ನಯನಾ, ಗರೋಡಿ
ದ್ವಿತೀಯ: ಸುರೇಖಾ ಗರೋಡಿ
ರಂಗೋಲಿ ಸ್ಪರ್ಧೆ:
ಪ್ರಥಮ: ಧನಲಕ್ಷ್ಮೀ
ದ್ವಿತೀಯ: ಶಿಲ್ಪ
ಸಬಿ- ಸನಾಲ್:
ಪ್ರಥಮ: ವಿಜಯಲಕ್ಷ್ಮಿ ಕೃಷ್ಣ
ದ್ವಿತೀಯ- ಇಬ್ಬರಿಗೆ: ಗುಣವತಿ ಗರೋಡಿ
ಗೀತಾ ಗರೋಡಿ
ಹಗ್ಗ-ಜಗ್ಗಾಟ ಸ್ಪರ್ಧೆ:
ಕುದ್ರೋಳಿ ತಂಡ: ಪ್ರಥಮ,
ಗರೋಡಿ ತಂಡ: ದ್ವಿತೀಯ.
ಸ್ಪರ್ಧಾ ಸಂಯೋಜಕ ಹಾಗೂ ಕೂಟದ ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಮೇಲುಸ್ತುವಾರಿ ವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ