ತುಳುನಾಡಿನಲ್ಲಿ ದೈವಗಳ ಶಕ್ತಿ ಅಪಾರ: ಡಾ. ರಾಜೇಶ್ ಬೆಜ್ಜಂಗಳ

Upayuktha
0

ವಿವೇಕಾನಂದ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ 



ಪುತ್ತೂರು: ಸಾಂಸ್ಕøತಿಕವಾಗಿ, ಸಾಹಿತ್ಯಿಕವಾಗಿ ಪಾರಂಪರಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ ತುಳುನಾಡಿನ ವೈಶಿಷ್ಟಗಳನ್ನು ಜನಪದ ಸಾಹಿತ್ಯವು ತಿಳಿಸಿಕೊಡುತ್ತದೆ. ತುಳುನಾಡಿನಲ್ಲಿ  ದೈವಗಳ ಶಕ್ತಿ ಅಪಾರ. ಅಂತಹ ದೈವದ ಕಥೆಯನ್ನು ಸಿರಿವಂತಿಕೆಯ ರೂಪದಲ್ಲಿ ತೋರಿಸಿ ಕೊಡುವ ಶ್ರೀಮಂತ ಕಲೆ ಪಾಡ್ದನ ಇದು ತುಳುನಾಡಿನ ವಿಶೇಷತೆಯನ್ನು ತಿಳಿಸಿ ಕೊಡುತ್ತದೆ. ತುಳುನಾಡಿನಲ್ಲಿ ವೈದಿಕ ಮತ್ತು ಜಾನಪದ ಸಾಹಿತ್ಯದ ಪರಿಕಲ್ಪನೆಗಳು ವಿಭಿನ್ನ ಎಂದು ಪುತ್ತೂರಿನ ತುಳು ಕೂಟದ ಕಾರ್ಯದರ್ಶಿ ಡಾ. ರಾಜೇಶ್ ಬೆಜ್ಜಂಗಳ ಹೇಳಿದರು.



ಅವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ  ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ತುಳು ಸಂಘ, ಮಾನವಿಕ ಸಂಘ, ಹಾಗೂ ಐಕ್ಯೂಎಸಿ  ಆಶ್ರಯದಲ್ಲಿ ನಡೆದ ತುಳು ಸಂಘೊದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತುಳು ಮೌಖಿಕ ಸಾಹಿತ್ಯ ವಿಷಯದ ಕುರಿತು ಮಾತನಾಡಿದರು.



ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್  ನಾಯ್ಕ್ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡು ಚಾರಿತ್ರ್ಯಕವಾದ ಸೃಷ್ಟಿ ಹೊಂದಿರು ವಂತಹ ಪ್ರದೇಶ. ಪರಶುರಾಮನ ಸೃಷ್ಟಿ ನಮ್ಮ ತುಳುನಾಡು. ಇದು ಅದರದ್ದೇ ಆದ ಇತಿಹಾಸವನ್ನು ಹೊಂದಿದೆ. ಇಲ್ಲಿಯ ಪರಂಪರೆ ಅದ್ಭುತವಾಗಿದೆ. ತುಳುವಿಗೆ ಲಿಪಿ ಇದ್ದು ಅದು ತನ್ನದೇ ಆದ ಭಾಷೆ ಶೈಲಿಯನ್ನು ಹೊಂದಿದೆ. ಎಂಟನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರುವಂತಾಗಬೇಕು  ಎಂದು ಹೇಳಿದರು.



ವೇದಿಕೆಯಲ್ಲಿ ಮಾನವಿಕ ಸಂಘದ ಸಂಯೋಜಕಿ ಮತ್ತು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅನಿತಾ ಕಾಮತ್  ಮತ್ತು ವ್ಯವಹಾರಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಪಿಕಾ. ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ತುಳು ಸಂಘದ ಅಧ್ಯಕ್ಷ ಆಶಿಶ್ ಆಳ್ವ ಸ್ವಾಗತಿಸಿ, ಕಾರ್ಯದರ್ಶಿ ಮನೀಶ್ ಪೂಜಾರಿ ವಂದಿಸಿದರು. ತೃತೀಯ ಕಲಾ ವಿಭಾಗದ ವಿದ್ಯಾರ್ಥಿನಿ ರಮ್ಯ ಶ್ರೀನಿವಾಸ್ ನಿರ್ವಹಿಸಿದರು.


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top