ಸುಸ್ಥಿರ ಹಬ್ಬದ ಅಭಿಯಾನ

Upayuktha
0


ಮಂಗಳೂರು: ಪರಿಸರ ಸ್ನೇಹಿ ಕ್ರಮಗಳನ್ನು ಪ್ರೋತ್ಸಾಹಿಸುವ ಅಭಿಯಾನದ ಅಂಗವಾಗಿ ನಗರದ ಫಿಜಾ ಬೈ ನೆಕ್ಸಸ್ ಮಾಲ್‍ವಿನೂತನವಾದ ಸುಸ್ಥಿರ ವಿಷಯದ ದೀಪಾವಳಿ ಅಭಿಯಾನವನ್ನು ಆರಂಭಿಸಿದೆ.


ಈ ದಿಸೆಯಲ್ಲಿ ಪ್ಯಾಕೇಜಿಂಗ್ ತ್ಯಾಜ್ಯ, ಪೇಪರ್ ಬ್ಯಾಗುಗಳು ಮತ್ತು ಹಳೆಯ ಪತ್ರಿಕೆಗಳನ್ನು ದಾನ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ. ಇದರ ಅಂಗವಾಗಿ ಹಮ್ಮಿಕೊಂಡಿರುವ ಪ್ರಚಾರದ ಮುಖ್ಯ ಅಂಶವೆಂದರೆ ಹೆಚ್ಚಿನ ಮಾಲ್ ಗಳಲ್ಲಿ ದೀಪಾವಳಿ ಹಬ್ಬದ ಅಲಂಕಾರ ಸಾಧನಗಳನ್ನು ತ್ಯಾಜ್ಯ ಕಾಗದವನ್ನು ಪುನರ್ಬಳಕೆ ಮಾಡಿಕೊಂಡು ತಯಾರಿಸಿದ್ದಾಗಿರುತ್ತವೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ. ದಸರಾ ಹಾಗೂ ದೀಪಾವಳಿ ವರೆಗೂ ಈ ಅಪೂರ್ವ ಕಲಾಕೃತಿ ಪ್ರದರ್ಶನಕ್ಕೆ ಇರುತ್ತದೆ.


ಈ ಹಬ್ಬದ ಸೀಸನ್ ಅನ್ನು ಇನ್ನಷ್ಟು ವಿಶೇಷ ಮತ್ತು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ನೆಕ್ಸಸ್ ನ ಫಿಝಾ ನಗರದಲ್ಲಿ ಇದೇ ಮೊದಲ ಬಾರಿಗೆ ವಿಖ್ಯಾತ ಮಂಗಳೂರಿನ ಪಂಪ್ ವೆಲ್ ಎಂದು ಕರೆಯಲಾಗುವ ಮಹಾವೀರ್ ವೃತ್ತದ ಪ್ರತಿಕೃತಿಯನ್ನು ಸಿದ್ಧಪಡಿಸಲಾಗಿದೆ.


ಈ ವೃತ್ತಕ್ಕೆ ಮಹಾವೀರ್ ವೃತ್ತ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ 2003 ರಲ್ಲಿ ಜೈನ ಸಮುದಾಯದವರು ಈ `ಕಲಶ'ವನ್ನು ಕೊಡುಗೆಯಾಗಿ ನೀಡಿದ್ದರು. ಈ ಅವಿಸ್ಮರಣೀಯ ಕ್ಷಣಗಳನ್ನು ಮರುಕಳಿಸುವ ದೃಷ್ಟಿಯಿಂದ ಮಂಗಳೂರಿನ ಅತ್ಯಂತ ಪ್ರೀತಿಪಾತ್ರವಾದ ಹೆಗ್ಗುರುತಿನ ಪ್ರತಿಕೃತಿಯನ್ನು ಸಿದ್ಧಪಡಿಸಲಾಗಿದ್ದು, ಅಕ್ಟೋಬರ್ 17 ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top