ಉತ್ತಮ ಸಂಸ್ಕಾರ ಮಾರ್ಗದರ್ಶನ ನೀಡುವ ಗುರು ಹಿರಿಯರು ಸದಾ ಸ್ಮರಣೀಯರು : ಸುಧೀರ್ ಶೆಟ್ಟಿಕಣ್ಣೂರು

Upayuktha
0


ಸುರತ್ಕಲ್‌: ಉತ್ತಮ ಸಂಸ್ಕಾರ ಮಾರ್ಗದರ್ಶನ ನೀಡುವ ಗುರು ಹಿರಿಯರು ಸದಾ ಸ್ಮರಣೀಯರು. ವಿದ್ಯೆ ನೀಡುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿಕಣ್ಣೂರು ನುಡಿದರು.


ಗೋವಿಂದದಾಸಕಾಲೇಜಿನ (1991-92) ತಂಡದ ವಿದ್ಯಾರ್ಥಿಯಾಗಿರುವ ಸುಧೀರ್ ಶೆಟ್ಟಿಕಣ್ಣೂರು ಅವರಿಗೆ1991-92ನೇ ಸಾಲಿನ ಬಿ.ಕಾಂ ತಂಡದ ಸಹಪಾಠಿಗಳು, ಗೋವಿಂದದಾಸ ಕಾಲೇಜು ಮತ್ತು ಗೋವಿಂದದಾಸ ಅಲ್ಯುಮ್ನಿ ಅಸೋಸಿಯೇಶನ್‍ಗಳ ಸಹಭಾಗಿತ್ವದಲ್ಲಿ ನಡೆದ ಸಮ್ಮಾನ ಸಮಾರಂಭ, 1991-92 ಬಿ.ಕಾಂ ವಿದ್ಯಾರ್ಥಿಗಳ ಪುನರ್‍ಮಿಲನ ಹಾಗೂ ನಿವೃತ್ತ ಗುರುಗಳ ಸಮ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.


ಮುವತ್ತೊಂದು ವರ್ಷಗಳ ಅನಂತರದಲ್ಲಿ ಜೊತೆ ಸೇರಿದ1991-92ರ ಬಿ.ಕಾಂ ತಂಡದ ವಿದ್ಯಾರ್ಥಿಗಳು ತಮ್ಮ ಸಹಪಾಠಿ ಸುಧೀರ್‍ಕಣ್ಣೂರು ಅವರನ್ನು ಸಮ್ಮಾನಿಸಿದರು.ತಮಗೆ ಕಲಿಸಿದ  ಹಿರಿಯ ನಿವೃತ್ತ ಉಪನ್ಯಾಸಕರುಗಳಾದ ಪ್ರೊ. ವೈ.ವಿ. ರತ್ನಾಕರರಾವ್, ಪ್ರೊ. ರಮೇಶ್ ಕುಳಾಯಿ, ಪ್ರೊ.ರಾಧಾ ವಿಟ್ಠಲ್, ಪ್ರೊ.ಜನಾರ್ಧನ ಭಟ್, ಪ್ರೊ. ಟಿ.ಎಸ್. ಶ್ರೀಪೂರ್ಣ, ಪ್ರೊ.ದೇವಪ್ಪ ಕುಳಾಯಿ, ಡಾ.ಕೆ.ಶಿವಶಂಕರ ಭಟ್, ಶರತ್‍ಕುಮಾರ್‍ ಅವರನ್ನು ಗೌರವಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ವಿದೇಶವನ್ನು ಒಳಗೊಂಡಂತೆ ನಾಡಿನ ಬೇರೆ ಬೇರೆ ಕಡೆಗಳಿಂದ ಬಂದಿದ್ದ ಹಳೆ ವಿದ್ಯಾರ್ಥಿಗಳು ಕಲಿತ ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವುದಾಗಿ ತಿಳಿಸಿದರು.


ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಮೇಯರ್ ಸುಧೀರ್ ಶೆಟ್ಟಿಕಣ್ಣೂರು ಅವರನ್ನು ಅಭಿನಂದಿಸಿದರು. ಹಿಂದು ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಶ್ರೀರಂಗ ಹೆಚ್, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ.ರಮೇಶ್ ಕುಳಾಯಿ, ನಿವೃತ್ತ ಪ್ರಾಂಶುಪಾಲ ಪ್ರೊ. ವೈ.ವಿ. ರತ್ನಾಕರರಾವ್, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮಿ ಪಿ., ಗೋವಿಂದದಾಸ ಅಲ್ಯುಮ್ನಿ ಅಸೋಸಿಯೇಶನ್‍ನ ಅಧ್ಯಕ್ಷ ಎಂ. ರಮೇಶ್‍ರಾವ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್‍ಕುಮಾರ್, ಅಬ್ದುಲ್‍ಜಲೀಲ್ ಶುಭ ಹಾರೈಸಿದರು. ಅಲ್ಯುಮ್ನಿ ಅಸೋಸಿಯೇಶನ್‍ನ ಉಪಾಧ್ಯಕ್ಷೆ ಸಾಯಿಗೀತಾ, ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಶ್ ಸುರತ್ಕಲ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಕಾಲೇಜಿನ ಉಪನ್ಯಾಸ ವರ್ಗದವರು ಉಪಸ್ಥಿತರಿದ್ದರು.


ಶಶಿಕಲಾ ಕಾಂಚನ್ ಸ್ವಾಗತಿಸಿದರು. ಇಫ್ತಿಕಾರ್ ಮತ್ತು ಕೀರ್ತಿ ದಯಾನಂದ ಸಮ್ಮಾನಿತರನ್ನು ಪರಿಚಯಿಸಿದರು. ಶಶಿಕಲಾ ಶೆಟ್ಟಿ ವಂದಿಸಿದರು. ಸಿದ್ಧಾರ್ಥ ಪ್ರಭು ಕಾರ್ಯಕ್ರಮ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top