ಆಸಕ್ತಿಯಿಂದ ಅಧ್ಯಯನ ನಡೆಸಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ: ಸುರೇಶ್ ಎಂ.ಎಸ್

Upayuktha
0



ಮಂಗಳೂರು: ಆಸಕ್ತಿಯಿಂದ ಅಧ್ಯಯನ ನಡೆಸಿದಾಗ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿ ದೆಸೆಯಿಂದಲೇ ಪೂರ್ವ ತಯಾರಿಯನ್ನು ಮಾಡುವುದರ ಮೂಲಕ ಐ.ಎ.ಎಸ್., ಯು.ಪಿ.ಎಸ್.ಸಿ. ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯ ಎಂದು ಸರ್ವಜ್ಞ ಐ.ಎ.ಎಸ್. ಅಕಾಡೆಮಿಯ ಲಯನ್ ಸುರೇಶ್ ಎಂ.ಎಸ್. ಅಭಿಪ್ರಾಯಪಟ್ಟರು.



ಅವರು ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಮಾನವಿಕ ಸಂಘ ಮತ್ತು ಲಯನ್ಸ್ ಕ್ಲಬ್ ನ್ಯೂ ಮಂಗಳೂರಿನ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಉಪನ್ಯಾಸ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. 



ನವ ಮಂಗಳೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಅಬೂಬಕ್ಕರ್ ಕುಕ್ಕಾಡಿ ಮಾನವಿಕ ಸಂಘದ 2023-24ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಲಯನ್ಸ್ ಕ್ಲಬ್ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಜಿಲ್ಲಾ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷೆ ಉಷಾ ಮನೋಜ್ ಶುಭ ಹಾರೈಸಿದರು.



ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ. ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್, ಪ್ರಾಧ್ಯಾಪಕಿರಾದ ದಯಾ ಸುವರ್ಣ, ಡಾ. ವಿಜಯಲಕ್ಷ್ಮಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಲಯನ್ಸ್ ಕ್ಲಬ್ ಜಿಲ್ಲಾ ನಿರ್ದೇಶಕ ಮನೋಜ್ ಕುಮಾರ್, ಲಯನ್ಸ್ ಕ್ಲಬ್ ನ್ಯೂ ಮಂಗಳೂರಿನ ಕಾರ್ಯದರ್ಶಿ ಮುರಳೀಧರ್, ಕೋಶಾಧಿಕಾರಿ ಕರುಣಾಕರ ಶೆಟ್ಟಿ, ಅನಿಲ್ ಕುಮಾರ್, ನೂರ್‍ಜಹಾನ್ ಕುಕ್ಕಾಡಿ ಉಪಸ್ಥಿತರಿದ್ದರು.ಪ್ರೊ. ಹರೀಶ ಆಚಾರ್ಯ ಸ್ವಾಗತಿಸಿ ಸೌಪರ್ಣಿಕ ವಂದಿಸಿದರು. ಭೀಮರಾಜ್ ಕಾರ್ಯಕ್ರಮ ನಿರೂಪಿಸಿದರು.



إرسال تعليق

0 تعليقات
إرسال تعليق (0)
To Top