ಸಿಂಚನಾಳ ನೆರವಿಗಾಗಿ ನವರಾತ್ರಿ ವೇಷ ಹಾಕಿ ಹಣ ಸಂಗ್ರಹಿಸುತ್ತಿರುವ ವಿದ್ಯಾರ್ಥಿಗಳು

Upayuktha
0
ಸುರತ್ಕಲ್‌ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿಗಳ ಮಾನವೀಯ ಕಾರ್ಯ



ಸುರತ್ಕಲ್: ಮೂಡುಬಿದಿರೆ ಸಮೀಪದ ಮಾರ್ಪಾಡಿ ಗ್ರಾಮದ ಬಬಿತಾ ಬಂಗೇರ ಇವರ ಪುತ್ರಿ 12 ವರ್ಷದ ಸಿಂಚನಾ ನರಗಳ ಸಮಸ್ಯೆ, ಮಿದುಳು ಮತ್ತು ಮೂತ್ರಕೋಶದ ಸಮಸ್ಯೆಗಳಿಂದ ಬಳಲುತ್ತಿದ್ದು, ಈಕೆಯ ಚಿಕಿತ್ಸೆಗೆ ಸುಮಾರು 5 ಲಕ್ಷಕ್ಕೂ ಅಧಿಕ ಖರ್ಚಾಗುತ್ತಿದೆ.


ಈ ಬಡ ಕುಟುಂಬದ ನೆರವಿಗಾಗಿ ಸಿಂಚನಾಳ ಸಮಸ್ಯೆಗೆ ಸ್ಪಂದಿಸಿದ ಸುರತ್ಕಲ್ ಗೋವಿಂದದಾಸ ಕಾಲೇಜಿನ ಬಿಎ ವಿದ್ಯಾರ್ಥಿಗಳಾದ ಮನೀಶ್ ಡಿ ಶೆಟ್ಟಿ, ರಾಜು, ಬಸವರಾಜ್‌, ಶರಣ್‌ ಮತ್ತು ದೀಪೇಶ್ ನವರಾತ್ರಿಯ ಸಂದರ್ಭದಲ್ಲಿ ವೇಷ ಹಾಕಿ ಸಂಗ್ರಹವಾಗುವ ಮೊತ್ತವನ್ನು ಬಾಲಕಿಯ ಚಿಕಿತ್ಸೆಗೆ ನೀಡುವ ನಿರ್ಧಾರ ಮಾಡಿದ್ದಾರೆ.


ವಿದ್ಯಾರ್ಥಿಗಳ ಈ ಸಮಾಜಮುಖಿ ಕಾರ್ಯಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣಮೂರ್ತಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top