ಬೆಳಕು ತೋರಿದ ಮಹಾ ಗುರು- ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾ ಸ್ವಾಮಿಗಳು

Upayuktha
0


ಭಾದ್ರಪದ ಬಹುಳ ಅಮಾವಾಸ್ಯೆ ಇಂದು ಶೃಂಗೇರಿ ಶಾರದಾ ಪೀಠದ ಜೀವನ್ಮಮುಕ್ತ ಜಗದ್ಗುರು ಶಾರದಾ ಪೀಠದ ಮಾಣಿಕ್ಯ ಪ್ರಾತಸ್ಮರಣೀಯರಾದ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾ ಸ್ವಾಮಿಗಳ ಆರಾಧನೆ. 


ಧರ್ಮವೆಂದರೆ ಸನ್ನಡತೆ, ದುರ್ನಡತೆಯೇ ಅಧರ್ಮ.ಈ ಧರ್ಮಾಧರ್ಮಗಳನ್ನು ಪದೇ ಪದೇ ಬೋಧಿಸುವುದಕ್ಕಾಗಿ ಅವತಾರಗಳು ಉಂಟಾಗುತ್ತಲೇ ಇವೆ. ಈ ಅವತಾರಿಗಳಿಗೂ ನಮಗೂ ಏನು ವ್ಯತ್ಯಾಸ? ಅವತಾರಿಗಳು ಲೋಕೋದ್ಧಾರಕ್ಕಾಗಿ ಜನ್ಮ ತಾಳಿದವರು. ನಾವು ನಮ್ಮ ಪೂರ್ವ ಜನ್ಮಗಳಲ್ಲಿ- ನೂರಾರು ಜನ್ಮಗಳು - ನಡೆಸಿದ ಪುಣ್ಯಪಾಪ ಕರ್ಮಗಳ ಫಲವನ್ನು ಅನುಭವಿಸುವುದಕ್ಕಾಗಿ ಪದೇ ಪದೇ ಹುಟ್ಟುತ್ತಲೇ ಇರುತ್ತೇವೆ. ಈ ಕರ್ಮ ಮತ್ತು ಅದರ ಫಲವು ನಮ್ಮನ್ನು ಎಡೆಬಿಡದೆ ಕಾಡುತ್ತದೆ. ಆದರೆ ಆಧಿಕಾರಿಕ ಪುರುಷರಾದ ಮಹಾತ್ಮರು ನಮ್ಮನ್ನು ಕರ್ಮಜಂಜಡದಿ೦ದ ಬಿಡಿಸಲು ಮಾರ್ಗದರ್ಶನ ಮಾಡುವ, ಪಥದರ್ಶನ ಮಾಡಿಸುವ ದಿವ್ಯ ದೀಪಧಾರಿಗಳು. ಅಂಥವರಲ್ಲಿ ಪ್ರಮುಖರು  ಶ್ರೀ ಶೃಂಗೇರಿಯ ಶಾರದಾಪೀಠದ ಬಹು ಹಿರಿಯ ಗುರುಗಳಲ್ಲಿ ಒಬ್ಬರು, ನಿಜವಾದ ಸಂನ್ಯಾಸ ಎಂಬ ಪದದ ಅರ್ಥಕ್ಕೆ ಮಾದರಿಯಾದವರು .... ಸದಾ ಆತ್ಮಚಿಂತನೆಯಲ್ಲಿಯೇ ನಿರತರಾದ ವೈರಾಗ್ಯ ತಪೋಮೂರ್ತಿ, ಮಹಾ ತಪಸ್ವಿಗಳು,  ಬಳಿ ಸಾರಿದವರಿಗೆ ದಾರಿದೀಪವಾದ ನಿಜವಾದ ಗುರುಗಳು ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿಗಳು.

••••••••••••••••••••••••••••••••••••••••••••••••••••••••

ಸದಾತ್ಮಧ್ಯಾನನಿರತಂ ವಿಷಯೇಭ್ಯಃ ಪರಾಣ್ಮುಖಮ್ ।

ನೌಮಿ ಶಾಸ್ತ್ರೇಷು ನಿಷ್ಣಾತಂ ಚಂದ್ರಶೇಖರಭಾರತೀಮ್ ॥

•••••••••••••••••••••••••••••••••••••••••••••••••••••••••


ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ಗೋಪಾಲ ಶಾಸ್ತ್ರಿ ಮತ್ತು ಧರ್ಮಪತ್ನಿ ಶ್ರೀಮತಿ ಲಕ್ಷ್ಮಮ್ಮನವರ ಸುಪುತ್ರ  16.10.1882ರಲ್ಲಿ ಜನಿಸಿದರು. ಅವರೇ ಶೃಂಗೇರಿ ಪೀಠದಲ್ಲಿ ಅತ್ಯಂತ ಪ್ರಖರವಾದ ವಿದ್ವತ್ ತೇಜಸ್ಸು, ತಪಸ್ಸಿನ ಪ್ರತಿ ಮೂರ್ತಿಯಂತಿದ್ದ ಶ್ರೀ ಶ್ರೀ ಚಂದ್ರಶೇಖರ ಭಾರತಿ ಮಹಾ ಸ್ವಾಮಿಗಳು. ಅವರ ಮಾತಾ ಪಿತೃಗಳ ಹರಕೆಯಂತೆ ಅಂದಿನ ಪೀಠಾಧಿಪತಿಗಳಾಗಿದ್ದ  ಶ್ರೀ ಶ್ರೀ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿಗಳಿಗೆ ಒಪ್ಪಿಸಲು ಮುಂದೆ ಶ್ರೀ ಸಂಸ್ಥಾನವೇ ಇವರ ಎಲ್ಲಾ ವಿದ್ಯಾಭ್ಯಾಸ, ವೇದಾಧ್ಯಯನದ ವ್ಯವಸ್ಥೆ ಮಾಡಿದರು. ಶಾಲಾ ಕಾಲೇಜುಗಳಲ್ಲಿ ಮೊದಲ ದರ್ಜೆಯಲ್ಲಿ ತೇರ್ಗಡೆಯಾಗಲು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ವ್ಯವಸ್ಥೆಯಾಯಿತು. ವೇದ ಸಂಸ್ಕೃತ ಕಾವ್ಯ ನಾಟಕ ಅಲಂಕಾರ ವ್ಯಾಕರಣ ಇತ್ಯಾದಿ ಶಾಸ್ತ್ರಗಳ ಅಧ್ಯಯನ ಇವರ ಅಭ್ಯುದಯವನ್ನು ನಿರೀಕ್ಷಿಸುತ್ತಿದ್ದ ಮಠಾಧಿಪತಿಗಳು ತಮ್ಮ ಮುಂದಿನ ಉತ್ತರಾಧಿಕಾರಿಯನ್ನಾಗಿ ನಿಯುಕ್ತಿ ಗೊಳಿಸಿದರು.


ಶೃಂಗೇರಿ ಶಾರದಾ ಪೀಠದ 34ನೇ ಆಚಾರ್ಯರಾಗಿ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು ವಿದ್ವಾಂಸರೂ, ಸಂತರೂ ಆಗಿದ್ದರು. ಬಾಲ್ಯದ ದಿನಗಳಿಂದ ಅವರಲ್ಲಿ ಧರ್ಮ,ಗುರು ಮತ್ತು ದೇವರ ಮೇಲಿನ ಭಕ್ತಿ ಅಪರಿಮಿತವಾಗಿತ್ತು.


ಯೋಗ ಸಾಧನೆಯ ಅಂತಿಮ ಹಂತದಲ್ಲಿರುವಾಗ ಸಮಾಜದಲ್ಲಿ ತಿಂಗಳುಗಟ್ಟಲೆ ಇರುತ್ತಿದ್ದರು. ಬಹಿರ್ಮುಖರಾಗಿರುತ್ತಿದ್ದಾಗ ದರ್ಶನಕ್ಕಾಗಿ ಅಸಂಖ್ಯಾ ಭಕ್ತರು ಬರುತ್ತಿದ್ದರು. ಎಲ್ಲರನ್ನು ವಿಚಾರಿಸಿ ತೀರ್ಥ ಪ್ರಸಾದ ದಯಪಾಲಿಸುತ್ತಿದ್ದರು. ಸಾಧಕರಿಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮಂತ್ರೋಪದೇಶ  ನೀಡುತ್ತಿದ್ದರು. ಅನ್ಯ ಮಾತ ದ್ವೇಷ ಬಿಟ್ಟರೆ ಕಲ್ಯಾಣವಾಗುತ್ತದೆ ಎಂಬ ಸಮನ್ವಯತೆ  ಸಾರುತ್ತಿದ್ದರು. ಪ್ರತಿಯೊಬ್ಬರೂ ಅವರ ಮತದಾನ ಕರುಣೆ ಮಾಡಬೇಕು ತಂದೆ ತಾಯಿಗಳ ಸೇವೆ ವೃತ್ತಿ ನಿಷ್ಠೆ ಬಹಳ ಮುಖ್ಯ ಎಂದು ಹೇಳುತ್ತಿದ್ದರು.


ತಮ್ಮ ಆರಂಭಿಕ ವರ್ಷಗಳಿಂದ, ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳು ತಮ್ಮ ಗುರುಗಳಾದ ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವನರಸಿಂಹ ಭಾರತಿಯವರ ಪ್ರಭಾವಕ್ಕೆ ಒಳಗಾದರು, ಅವರು ತಮ್ಮ ಶಿಕ್ಷಣದಲ್ಲಿ ವೈಯಕ್ತಿಕ ಆಸಕ್ತಿಯನ್ನು ಹೊಂದಿದ್ದರು. ಅವರು ಶೃಂಗೇರಿ ಮತ್ತು ಬೆಂಗಳೂರಿನ ಪಾಠಶಾಲೆಗಳಲ್ಲಿ ಅಧ್ಯಯನ ಮಾಡಿ ವೇದ ಶಾಸ್ತ್ರಗಳಲ್ಲಿ ಅಸಾಧಾರಣ ಪಾಂಡಿತ್ಯವನ್ನು ಪಡೆದಿದ್ದರು.


20ನೇ ವಯಸ್ಸಿನಲ್ಲಿ ಶೃಂಗೇರಿ ಶಾರದಾ ಪೀಠದ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆಯಲ್ಲಿ ದಕ್ಷರಾಗಿದ್ದರು. ಪ್ರತಿಷ್ಠಿತ ಶೃಂಗೇರಿ ಸಂಸ್ಥಾನದ ಉನ್ನತ ಸ್ಥಾನದ ನಡುವೆಯೂ ಯಾವುದೇ ಲೌಕಿಕ ಆಸೆಗಳಿಲ್ಲದೆ ಸರಳ ಜೀವನವನ್ನು ನಡೆಸಿದ ಅವರು ನಿಜವಾದ ಅರ್ಥದಲ್ಲಿ ಮಹಾನ್ ಸಂತರಾಗಿದ್ದರು. ಕೇವಲ ಒಂದು ನೋಟದಿಂದಲೇ, ದೇವರನ್ನು ನಂಬದವರನ್ನೂ ಭಕ್ತರನ್ನಾಗಿ ಪರಿವರ್ತಿಸುವ ಅಪರೂಪದ ಶಕ್ತಿ ಅವರಲ್ಲಿತ್ತು.


ಶಂಕರ ಸ್ಥಾಪಿತ ಶಾರದಾಸುತ ಚಂದ್ರಶೇಖರ ಭಾರತೀ ಸ್ವಾಮಿಯೆ ಕರುಣಿಸು ಅವಧೂತ ಪರಮಹಂಸ ಶ್ರೀ ಚಂದ್ರಶೇಖರ ಭಾರತಿ ಗುರುವೇ

||ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿಮಾಂ ||

 || ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷಮಾಂ ||


ಭಾರತಿ (ಶಾರದಾ) ಎಂಬ ಹೆಸರನ್ನು ಹೊಂದಿರುವ ಮಹಾನ್ ಸಂತ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾ ಸ್ವಾಮಿಗಳ ಪಾದ ಕಮಲಗಳಿಗೆ ಸಹಸ್ರ ಸಾಷ್ಟಾಂಗ ನಮನಗಳು.


- ಸೌಮ್ಯ ಸನತ್ 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top