ಸೇವಾ ಮನೋಭಾವ ಬೆಳೆಸಲು ರೋವರ್ಸ್- ರೇಂಜರ್ಸ್ ಸಹಕಾರಿ: ನವೀನ್ ಚಂದ್ರ ಅಂಬೂರಿ

Upayuktha
0



ಮೂಡುಬಿದಿರೆ: ‘ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಲು ರೋವರ್ಸ್ ಮತ್ತು ರೇಂಜರ್ಸ್ ಸಹಕಾರಿ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೂಡುಬಿದಿರೆ ಘಟಕದ ಖಜಾಂಚಿ, ಪ್ರಾಂತ್ಯ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನವೀನ್ ಚಂದ್ರ ಅಂಬೂರಿ ಹೇಳಿದರು.



 

ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ 2023-24ನೇ ಸಾಲಿನ ಚಟುವಟಿಕೆಗಳನ್ನು ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. 




‘ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ದೊರಕಿಸುವಲ್ಲಿ ರೋವರ್ಸ್ ಮತ್ತು ರೇಂಜರ್ಸ್ ಉಪಯುಕ್ತ’ ಎಂದ ಅವರು, ‘ಕುಕ್ಕಿಂಗ್ ವಿದೌಟ್ ಫೈರ್, ಟ್ರಕಿಂಗ್ ಹೈ ಕಿಂಗ್, ಬ್ಯಾಂಡ್ ಪಾರ್ಟಿ, ಲೈಫ್ ಸ್ಕಿಲ್ ಇತ್ಯಾದಿಗಳು ವಿದ್ಯಾರ್ಥಿಗಳಲ್ಲಿ ಸಹಕಾರಿ ಮನೋಭಾವ ಬೆಳೆಸುತ್ತದೆ. ಮಕ್ಕಳ ದೇಹ ಮತ್ತು ಮನಸ್ಸು ಸದೃಢ ವಾಗುತ್ತದೆ’ ಎಂದರು. 




ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, ‘ರೋವರ್ಸ್ ಮತ್ತು ರೇಂಜರ್ಸ್‌ ನಲ್ಲಿ ಕಲಿಯುವ ವಿಚಾರಗಳು ಬದುಕಿಗೆ ದಾರಿದೀಪವಾಗುತ್ತದೆ. ಸೇವಾ ಮನೋಭಾವ ಬೆಳೆಸುತ್ತದೆ. ಏನೇ ಗುರಿ ಇದ್ದರೂ ಅದನ್ನು ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಬೇಕು’ ಎಂದರು. 




ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುನಿಲ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್, ವಾಣಿಜ್ಯ ವಿಭಾಗದ ಡಿನ್ ಪ್ರಶಾಂತ್ ಎಂ.ಡಿ, ಕನ್ನಡ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ಇದ್ದರು. ಅರ್ಥಶಾಸ್ತ್ರ ಉಪನ್ಯಾಸಕಿ ವೀಣಾ ಆ್ಯಗ್ನೆಸ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಗಣಪತಿ ನಾಯಕ್ ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕಿ ತ್ರಿವೇಣಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top