
ಪುತ್ತೂರು: ಪುತ್ತೂರಿನ ಮುಳಿಯ ಜ್ಯುವೆಲ್ಸ್‌ನಲ್ಲಿ ನಡೆಯುತ್ತಿರುವ ವಜ್ರಾಭರಣಗಳ ಪ್ರದರ್ಶನ-ಮಾರಾಟ ಮೇಳ 'ಡೈಮಂಡ್ ಫೆಸ್ಟ್' ಇನ್ನು ಕೇವಲ ಎರಡು ದಿನ ಮಾತ್ರ ನಡೆಯಲಿದೆ.
ಇದುವರೆಗೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆಗಳು ದೊರೆತಿವೆ. ಸೆಪ್ಟೆಂಬರ್ 18ರಂದು ಪ್ರಾರಂಭವಾದ ಡೈಮಂಡ್ ಫೆಸ್ಟ್‌ಗೆ ಈಗಾಗಲೇ ಭಾರೀ ಸಂಖ್ಯೆಯ ಗ್ರಾಹಕರು ಆಗಮಿಸಿದ್ದು, ತಮ್ಮ ಆಯ್ಕೆಯ ವಜ್ರಾಭರಣಗಳನ್ನು ಖರೀದಿಸಿ ಸಂತಸಪಟ್ಟಿದ್ದಾರೆ. ಅಕ್ಟೋಬರ್ 5 ವರೆಗೆ ನಿಗದಿಪಡಿಸಲಾಗಿದ್ದ ಡೈಮಂಡ್ ಫೆಸ್ಟ್ ಅನ್ನು ವ್ಯಾಪಕ ಬೇಡಿಕೆಯ ಹಿನ್ನೆಲೆಯಲ್ಲಿ ಐದು ದಿನಗಳ ಕಾಲ ವಿಸ್ತರಿಸಿ ಅ.10ರ ವರೆಗೆ ಮರು ನಿಗದಿಪಡಿಸಲಾಗಿತ್ತು. ಇದೀಗ ಆ ಅವಧಿಯೂ ಮುಕ್ತಾಯದ ಹಂತಕ್ಕೆ ಬಂದಿದ್ದು ಗ್ರಾಹಕರಿಗೆ ಇನ್ನು ಈ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಮೆಚ್ಚಿನ ವಜ್ರಾಭರಣಗಳನ್ನು ಖರೀದಿಸಲು ಕೇವಲ ಎರಡು ದಿನಗಳ ಕಾಲಾವಕಾಶ ಮಾತ್ರ ಉಳಿದಿದೆ.
ಡೈಮಂಡ್ ಫೆಸ್ಟ್ ಆರಂಭವಾದ ದಿನದಿಂದಲೇ ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡಿ, ತಮಗಿಷ್ಟವಾದ ವಜ್ರಾಭರಣಗಳನ್ನು ಖರೀದಿಸುತ್ತಿದ್ದಾರೆ.
ಕೈಗೆಟುಕುವ ದರದಲ್ಲಿ ಮಹಿಳೆಯರ ಮನಮೆಚ್ಚುವ ವಜ್ರದ ಆಭರಣಗಳ ಖರೀದಿಗೆ ಮುಳಿಯ ಸಂಸ್ಥೆ ಅವಕಾಶ ಒದಗಿಸಿದೆ. ಆಕರ್ಷಕ ದರದಲ್ಲಿ ವಜ್ರದ ಆಭರಣಗಳನ್ನು ಖರೀದಿಸಬಹುದಾಗಿದೆ. ವೇದಾಂತ್ ಮತ್ತು ಕಿಸ್ನ ಎಂಬ ಎರಡು ಶ್ರೇಣಿಯ ಆಭರಣಗಳು ಡೈಮಂಡ್ ಫೆಸ್ಟ್‌ನಲ್ಲಿ ಲಭ್ಯವಿವೆ.
ವಜ್ರದ ಉಂಗುರ ಗೆಲ್ಲುವ ಅವಕಾಶ:
ಡೈಮಂಡ್ ಫೆಸ್ಟ್ ಮಾರಾಟ ಮತ್ತು ಪ್ರದರ್ಶನದಲ್ಲಿ ವಜ್ರಾಭರಣಗಳ ಅಮೋಘ ಸಂಗ್ರಹವಿದೆ. ವೇದಾಂತ್ ಎನ್ನುವ ವಜ್ರದ ಆಭರಣಗಳು, ಅಮೂಲ್ಯ ಡೈಮಂಡ್ ಹಾಗೂ ಕಿಸ್ನ ಡೈಮಂಡ್ ಗಳು ಲಭ್ಯವಿದೆ. ಉಂಗುರಗಳು, ನೆಕ್ಲೇಸ್‌ಗಳು, ಕಿವಿಯೋಲೆಗಳನ್ನು ಅತ್ಯಲ್ಪ ಗ್ರಾಹಕ ಸ್ನೇಹಿ ದರದಲ್ಲಿ ಪಡೆದುಕೊಳ್ಳಬಹುದು. ಖರೀದಿಯಲ್ಲಿ ವಜ್ರದ ಉಂಗುರ ಗೆಲ್ಲುವ ಅವಕಾಶ ಗ್ರಾಹಕರಿಗೆ ಲಭ್ಯವಿದೆ. ನಿಮ್ಮ ಹಳೆಯ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳೊಂದಿಗೆ ವಿನಿಮಯ ಮಾಡಿ 100 ರೂ. ಅಧಿಕ ಪಡೆಯಬಹುದಾಗಿದೆ.
ಕೈಗೆಟಕುವ ವೈಭವ:
ಮುಳಿಯ ಜುವೆಲ್ಸ್‌ನಲ್ಲಿ ವಜ್ರಾಭರಣಗಳ ಕೈಗೆಟಕುವ ದರದಲ್ಲಿ ದೊರೆಯುತ್ತದೆ. 3700ರಿಂದ 15 ಲಕ್ಷದವರೆಗಿನ ಆಭರಣಗಳು ಲಭ್ಯವಿದೆ. ಇದರಲ್ಲಿ ಉಂಗುರಗಳು 4700/-, ನೆಕ್ಲೇಸ್‌ಗಳು 48,400/-, ಪೆಂಡೆಂಟ್‌ಗಳು 3,700/-, ಕಿವಿಯೋಲೆ 5,300/-, ಬಳೆಗಳು 28,500/- ರಿಂದ ಪ್ರಾರಂಭವಾಗುತ್ತವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ