ಅನುಕ್ಷಣವೂ ನನಗೆ ನಿನ್ನದೇ ಧ್ಯಾನ
ನನ್ನೊಳಗೆ ಸದಾ ನಿನ್ನದೇ ಜೀವಗಾನ
ನಿನ್ನೊಂದಿಗೇ ನಿತ್ಯವೂ ಭಾವಯಾನ
ಕೃಷ್ಣಾ ಅಕ್ಷರಶಃ ನಿನ್ನದೇ ಅನುರಣನ.!
ಎದೆಯೊಳಗಿಹುದು ನಿನ್ನ ಪ್ರತಿಷ್ಟಾಪನ
ಉಸಿರುಸಿರಲಿ ನಿನ್ನನಾಮ ಸಂಕೀರ್ತನ
ನರನರದಿ ನಿನ್ನಯ ಭಾವ ಸಂವೇದನ
ಆವರಿಸಿರುವೆ ನೀ ಸಂಪೂರ್ಣ ಹೃನ್ಮನ.!
ದಿಗ್ದಿಗಂತಗಳಲೂ ನಿನ್ನದೇ ನಿತ್ಯದರ್ಶನ
ಅನುಕ್ಷಣವೂ ನಿನ್ನ ನೆನಪುಗಳ ನರ್ತನ
ಧಮನಿಯಲಿ ಮುರಳಿನಾದ ಸಂಚಲನ
ಮಾಧವಾ ಇದು ಜನ್ಮಗಳ ಸಂವಹನ.!
- ರಶ್ಮಿಪ್ರಸಾದ್ (ರಾಶಿ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ