ಪಾರ್ಶ್ವ ಚಂದ್ರಗ್ರಹಣ: ಮಂಗಳೂರು, ಉಡುಪಿಯಲ್ಲಿ ಗೋಚರಿಸಿದ್ದು ಹೀಗೆ...

Upayuktha
0


ಉಡುಪಿ: ಪೂರ್ಣಪ್ರಜ್ಞ ಹವ್ಯಾಸಿ ಖಗೋಳವೀಕ್ಷಕರ ಸಂಘವು, 28 ಅಕ್ಟೋಬರ್ 2023ರ ಪಾರ್ಶ್ವ ಚಂದ್ರಗ್ರಹಣವನ್ನು ಉಡುಪಿ ಮತ್ತು ಮಂಗಳೂರಿನಿಂದ ಸೆರೆಹಿಡಿದಿದೆ. ಅಕ್ಟೋಬರ್ 28 ರಂದು ರಾತ್ರಿ 11:31ಕ್ಕೆ ಈ ಗ್ರಹಣವು ಅರೆನೆರಳಿನ ಹಂತದಿಂದ ಪ್ರಾರಂಭಗೊಂಡಿತು.  ಹಾಗೆಯೇ (ಅಕ್ಟೋಬರ್ 29) 1:00 AM ನಿಂದ ಚಂದ್ರನ ಮೇಲೆ ಭೂಮಿಯ ನೆರಳು ಕಾಣಲು ಪ್ರಾರಂಭವಾಯಿತು. 1:44 AM ಕ್ಕೆ ಗರಿಷ್ಠ ಗ್ರಹಣ ಹಂತವನ್ನು ಗೋಚರಿಸಿ ಛಾಯಾಗ್ರಹಿಸಲು ಅವಕಾಶ ಖಗೋಳ ವೀಕ್ಷಕರಿಗೆ ಸಿಕ್ಕಿತು.


ತದನಂತರ, 2:00 AM  ಗಂಟೆಯ ಸುಮಾರಿಗೆ, ಚಂದ್ರನು ಮೋಡಗಳಿಂದ ಆವೃತವಾಗಿದ್ದು, ಉಡುಪಿ ಮತ್ತು ಮಂಗಳೂರಿನ ಹಲವು ಪ್ರದೇಶಗಳಲ್ಲಿ ಗ್ರಹಣವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ.



ಚಂದ್ರನ ಚಿತ್ರವು ಪೂರ್ಣಪ್ರಜ್ಞ ಕಾಲೇಜಿನ ತ್ರಿತೀಯ ಬಿ.ಕಾಂ ನ ವಿದ್ಯಾರ್ಥಿನಿ ಶಾಂತಿಕಾ ಉಪಾಧ್ಯಾ ಸೆರೆಹಿಡಿದಿದ್ದಾರೆ.

ಗ್ರಹಣದ ಅನೇಕ ಹಂತಗಳ ಚಿತ್ರವು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಅತುಲ್ ಭಟ್, ಇವರು ಸಂಕಲಿಸಿದ್ದಾರೆ. 




ಈ ವರ್ಷದ ಅಂತಿಮ ಗ್ರಹಣ ಮಾತ್ರವಲ್ಲದೆ, ಮುಂದಿನ ವರ್ಷ 2024ರಲ್ಲಿ ಯಾವುದೇ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಮತ್ತೊಮ್ಮೆ ಗ್ರಹಣ ನೋಡಲು ಸಾಧ್ಯವಾಗುವುದು ಸೆಪ್ಟೆಂಬರ್ 2025ರಲ್ಲಿ ಮಾತ್ರ. ಈ ಕಾರಣದಿಂದಾಗಿ, ಈ ಗ್ರಹಣವನ್ನು ವೀಕ್ಷಿಸುವ ಅವಕಾಶ ಅನನ್ಯ ವಾಗಿತ್ತು.


ಚಂದ್ರಗ್ರಹಣವು ಪ್ರತಿ ಬಾರಿ ಸೂರ್ಯಗ್ರಹಣದ ಒಂದು ಪಕ್ಷ ಪೂರ್ವ ಅಥವಾ ಒಂದು ಪಕ್ಷ ಕಳೆದ ನಂತರ ನಡೆಯುವುದು. ಅಕ್ಟೋಬರ್ 14ರಂದು ಸರಳರೇಖೆಯಲ್ಲಿ ಬಂದ ೩ ಆಕಾಶಕಾಯಗಳು, ಕಂಕಣ ಸೂರ್ಯಗ್ರಹಣ ಸಂಭವಿಸಿದವು. ಈ ಕಾರಣದಿಂದ ಅಕ್ಟೋಬರ್ 28 ರಂದು, ಈ ಮೂರು ಕಾಯಗಳು ಸೇರಿ ಈ ಚಂದ್ರಗ್ರಹಣ ಸಂಭವಿಸಿತು. ಸರಳರೇಖೆಯಿಂದ ಸ್ವಲ್ಪ ವಿಪಥವಾಗಿರುವುದರಿಂದ, ಚಂದ್ರನ ಬಿಂಬದ ಒಂದು ಭಾಗದಲ್ಲಿ ಮಾತ್ರ ಭೂಮಿಯ ನೆರಳು ಕಂಡಿತು. ಇದನ್ನು ಪಾರ್ಶ್ವ ಗ್ರಹಣ ಎಂದು ಗುರುತಿಸುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top