ಪಾಣೆಮಂಗಳೂರು: ಇಲ್ಲಿನ ಎಸ್. ವಿ. ಎಸ್ .ಶಾಲೆಯಲ್ಲಿ 99ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ವಿಜಯದಶಮಿಯಂದು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಭಕ್ತಿಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಲಾಗಿತ್ತು. ಶಾಲೆಯ ಹಿರಿಯ ವಿದ್ಯಾರ್ಥಿ ಬಿ. ಕೆ. ರಾಜ್ ಇವರ ನೇತೃತ್ವದಲ್ಲಿ ಭಾರತಮಾತೆಗೆ ಪುಷ್ಪ ನಮನ ನಡೆಯಿತು.
ಶಾಲಾ ಹಿರಿಯ ವಿದ್ಯಾರ್ಥಿಗಳಾದ ಗಣೇಶ ಹೇರಳ , ರಾಜಾ ಬಂಟ್ವಾಳ, ಕೃಷ್ಣ ನಾಯ್ಕ್ , ರಾಜೇಂದ್ರ ನಾಯಕ್ , ಪ್ರೇಮನಾಥ ಶೆಟ್ಟಿ , ಪಿ. ಗಣೇಶ ನಾಯಕ್ , ಕೆ. ವಸಂತ ಮಾಧವ ಕಾಮತ್ , ಭಕ್ತಿಗೀತೆಗಳ ಕಾರ್ಯಕ್ರಮದ ಸಂಯೋಜಕ ಮೆಲುದನಿ ತಂಡದ ಯಶವಂತ ಸರ್ , ಮೊದಲಾದವರು ಉಪಸ್ಥಿತರಿದ್ದರು .
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ