ಮಂಗಳೂರು: ಭಾರತದ ಪ್ರಮುಖ ಜೀವ ವಿಮಾ ಕಂಪನಿಗಳಲ್ಲಿ ಒಂದಾದ ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಟಾಟಾ ಎಐಎ), ಭಾರತೀಯ ಜೀವ ವಿಮಾ ಕಂಪನಿಗಳಲ್ಲಿ ಅತ್ಯುತ್ತಮ ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ದಾಖಲಿಸಿದೆ.
ಕಂಪನಿಯು 2024ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ, ಎಲ್ಲ ಐದು ಸಮೂಹಗಳಲ್ಲಿ ಉದ್ಯಮದಲ್ಲೇ ಉತ್ತಮ ಎನಿಸಿದ ನಿರಂತರತೆಯ ಅನುಪಾತವನ್ನು ನೋಂದಾಯಿಸಿದೆ, ಇದು ಟಾಟಾ ಎಐಎ ಬಗೆಗಿನ ತಮ್ಮ ವಿಶ್ವಾಸವನ್ನು ದೃಢಪಡಿಸಿದ ಗ್ರಾಹಕರ ಶೇಕಡಾವಾರು ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ. ವೈಯಕ್ತಿಕ ಮರಣದ ಹಕ್ಕುಗಳ ಪರಿಹಾರದ ಅನುಪಾತವು 2022ನೇ ಹಣಕಾಸು ವರ್ಷದಲ್ಲಿ ಇದ್ದ ಶೇಕಡ 98.53 ರಿಂದ 2023ನೇ ಹಣಕಾಸು ವರ್ಷದಲ್ಲಿ ಶೇಕಡ 99.01 ಕ್ಕೆ ಸುಧಾರಿಸಿದೆ ಎಂದು ಟಾಟಾ ಎಐಎ ಲೈಫ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಕಾರ್ಯಾಚರಣೆಯ ಮುಖ್ಯಸ್ಥ ಸಂಜಯ್ ಅರೋರಾ ಹೇಳಿದ್ದಾರೆ.
ಜೂನ್ 2023ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ, ಟಾಟಾ ಎಐಎ 13ನೇ ತಿಂಗಳು (88.2%), 25ನೇ ತಿಂಗಳು (80.3%), 37ನೇ ತಿಂಗಳು (76%), 49ನೇ ತಿಂಗಳು (70.9%) ಮತ್ತು ಮತ್ತು 61ನೇ ತಿಂಗಳು (66.8%) ಸೇರಿ ಎಲ್ಲ ಐದು ನಿರಂತರತೆ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಉಳಿಸಿಕೊಂಡಿದೆ ಎಂದು ವಿವರಿಸಿದ್ದಾರೆ.
ನಿರಂತರತೆಯ ಅನುಪಾತವು ಪ್ರತಿ ವರ್ಷ ತಮ್ಮ ಜೀವ ವಿಮಾ ಪಾಲಿಸಿಯನ್ನು ನವೀಕರಿಸುವ ಗ್ರಾಹಕರ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ, ಹೆಚ್ಚಿನ ನವೀಕರಣ ದರ, ಉತ್ಪನ್ನ ಮತ್ತು ವಿಮಾದಾರರ ಸೇವೆಯಿಂದ ಗ್ರಾಹಕರು ಹೆಚ್ಚು ತೃಪ್ತರಾಗಿರುವುದನ್ನು ಬಿಂಬಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ