ಮಂಗಳೂರು: ದೇಶದ ಮೇಲೆ ಪ್ರೀತಿ, ಸಮರ್ಪಣಾ ಮನೋಭಾವ ದೇಶದ ಪ್ರತೀ ಪ್ರಜೆಯಲ್ಲಿಯೂ ಇದ್ದಾಗ ಎಂತಹ ಸಂಕಷ್ಟ ಬಂದರೂ ಎದುರಿಸಲು ಸಾಧ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ವೀರ ಸ್ಮರಣೆಗಾಗಿ ಹಮ್ಮಿಕೊಂಡಿರುವ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಐತಿಹಾಸಿಕ ನಡೆಯಾಗಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ, ಅಂಚೆ ಇಲಾಖೆ,ಲೀಡ್ ಬ್ಯಾಂಕ್, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಇದರ ಸಹಯೋಗದೊಂದಿಗೆ ಮೇರಿ ಮಾಟಿ ಮೇರಾ ದೇಶ್ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಅಂಗವಾಗಿ ಅಮೃತ ಕಲಶ ಯಾತ್ರೆ ಯ ಸಮಾರೋಪ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾತೃಭೂಮಿ ಎಂದು ಬಂದಾಗ ನಾವೆಲ್ಲಾ ಸಮರ್ಪಣಾ ಮನೋಭಾವ ಹೊಂದಬೇಕು. ದೇಶದ ವೀರ ಸ್ವಾತಂತ್ರ್ಯ ಹೋರಾಟಗಾರರು, ನಮ್ಮನ್ನು ಕಾಪಾಡುವಲ್ಲಿ ಬಲಿದಾನವನ್ನು ಮಾಡಿದ ವೀರ ಯೋಧರ ಸ್ಮರಣೆಯಲ್ಲಿ ರಾಜಧಾನಿಯಲ್ಲಿ ಉದ್ಯಾನವನ ನಿರ್ಮಾಣ ಆ ಮೂಲಕ ನಮ್ಮ ಮುಂದಿನ ಪೀಳಿಗೆಯಲ್ಲಿ ಸದಾ ಜಾಗೃತಿ ಮನಸ್ಥಿತಿಯನ್ನು ಮೂಡಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ನೆಹರು ಯುವ ಕೇಂದ್ರ ದ ಜಗದೀಶ್ ಅಂಚೆ ಇಲಾಖೆಯ ಅಧಿಕಾರಿಗಳಾದ ಶಂಕರ್, ಆಡಳಿತಾಧಿಕಾರಿ ತಾಲೂಕು ಪಂಚಾಯತ್ ರವಿಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖರಾದ ನಾಗರತ್ನ, ಉದಯ್ ಕುಮಾರ್, ತಾಲೂಕು ಪಂಚಾಯತ್ ನಿರ್ದೇಶಕ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ