ಕೆ ಆರ್ ಪೇಟೆ: ತಾಲ್ಲೂಕಿನ ಗೋವಿಂದೇಗೌಡನಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜೇಗೌಡ ಸಂಘದ ಸದಸ್ಯರು ಹಾಗೂ ಗ್ರಾಮದ ಮುಖಂಡರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಹಕಾರ ಸಂಘಗಳು ರೈತರ ಜೀವನಾಡಿಯಾಗಿವೆ. ಹಾಲಿನ ಡೈರಿ ಅಭಿವೃದ್ಧಿಯಿಂದ ನಮ್ಮ ಗ್ರಾಮದ ರೈತಾಪಿ ಜನರ ಬದುಕು ಹಸನುಗೊಳ್ಳುತ್ತದೆ. ಹಾಗಾಗಿ ನಾವೆಲ್ಲರೂ ಸೇರಿ ರಾಜಕಾರಣವನ್ನು ಬದಿಗೊತ್ತಿ ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸೋಣ. ಸಂಘವು ಉಳಿದರೆ ನಾವು ಉಳಿದಂತೆ. ಅಚ್ಚ ಹಾಲಿಗೆ ಕಲಬೆರಕೆ ಮಾಡದೇ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಬೇಕು. ಈ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಸಂಘವು ಈಗಾಗಲೇ ನಮ್ಮ ಹಿರಿಯ ಸಹಕಾರಿ ಧುರೀಣರ ಶ್ರಮದ ಫಲವಾಗಿ ನಮ್ಮ ಸಂಘವು ತಾಲ್ಲೂಕಿನಲ್ಲಿರುವ ಉತ್ತಮ ಡೇರಿಗಳಲ್ಲಿ ನಮ್ಮದು ಸಹ ಒಂದಾಗಿದೆ. ತಾಲ್ಲೂಕಿನಲ್ಲಿಯೇ ಮಾದರಿ ಹಾಲಿನ ಡೇರಿ ಮಾಡಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಆದ್ದರಿಂದ ಸಂಘವನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಸಂಘದ ನೂತನ ಅಧ್ಯಕ್ಷ ಮಂಜೇಗೌಡ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಬೆಟ್ಟೇಗೌಡ, ಗೋಪಾಲಗೌಡ, ದಿವಾಕರ್, ಸುರೇಶ್ ಸಂಘದ ನಿರ್ದೇಶಕರಾದ ಸುಶೀಲಮ್ಮ, ಸುನಂದಾ, ಗ್ರಾಮದ ಯಜಮಾನರಾದ ಆರ್ ನಾಗೇಗೌಡ, ಇ ಗೋಪಾಲಗೌಡ, ಪ್ರಕಾಶ್, ಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ