ಮಂಗಳೂರು: ಜಿಲ್ಲೆಯ 352 ಗ್ರಾಮ, 1779 ಪ್ರೌಢ, ಪ್ರಾಥಮಿಕ, 102 ಪಿ.ಯು ಕಾಲೇಜು, 73 ಪದವಿ ಕಾಲೇಜುಗಳಲ್ಲಿ ಸ್ವಚ್ಛತೆಯೆ ಸೇವೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಜಿಲ್ಲೆಯಾದ್ಯಂತ ನಡೆದ 'ಸ್ವಚ್ಛತಾ ಹಿ ಸೇವಾ ಅಭಿಯಾನ' (ಸ್ವಚ್ಛತೆಯೇ ಸೇವೆ ಅಭಿಯಾನ ಸೆಪ್ಟಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ನಡೆದಿದ್ದು ಈ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 43 ಲಕ್ಷ ವ್ಯಕ್ತಿಗಳು ಕೈ ಜೋಡಿಸಿದ್ದಾರೆ. 9 ತಾಲೂಕಿನ ಒಂದು ಕೇಂದ್ರ ಗ್ರಾಮ ಪಂಚಾಯತ್ ಆಯ್ದುಕೊಂಡು ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಅವಧಿಯಲ್ಲಿ ರೈಲ್ವೆ ನಿಲ್ದಾಣ, ರಸ್ತೆಯ ಇಕ್ಕೆಲಗಳು, ಶಾಲಾ ಸುತ್ತ –ಮುತ್ತ, ಇತಿಹಾಸಿಕ ದೇವಾಲಯ, ಪ್ರವಾಸೋದ್ಯಮ ತಾಣ, ಬೀಚ್ ಸ್ವಚ್ಛತೆ, ಪ್ರತಿಜ್ಞಾ ವಿಧಿ ಬೋಧನೆ ನಡೆದವು.
ಬದಲಾವಣೆಗಾಗಿ ಅಭಿಯಾನ
ಜನರ ಮನೋಭಾವ ಬದಲಾವಣೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿದ್ದು, ರೈಲು ಹಳಿಗಳ ಸ್ವಚ್ಛತೆ, ಪ್ರಮುಖ ನಿಲ್ದಾಣಗಳಿಗೆ ತೆರಳುವ ಮಾರ್ಗಗಳು, ಮನೆ ಮನೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ಮೂಲನೆಗೆ ವಿಶೇಷ ಒತ್ತು ನೀಡಲಾಗಿದೆ. ಈ ಅಭಿಯಾನವು ಸ್ವಚ್ಛ ಸಂವಾದ, ಸ್ವಚ್ಛ ಪರಿಸರ, ಸ್ವಚ್ಛ ಗ್ರಾಮ, ಸ್ವಚ್ಛ ಪರಿಸರ, ಸ್ವಚ್ಛ ಆಹಾರ್ ಮತ್ತು ಸ್ವಚ್ಛ ಪ್ರವಾಸಿ ತಾಣ ಈ ರೀತಿಯಾಗಿ ನಡೆದಿದೆ.
15 ದಿನ, 56 ಲಕ್ಷ ಜನ ಅಭಿಯಾನ:
ಸ್ವಚ್ಛತಾ ಹಿ ಸೇವಾ ಅಭಿಯಾನದ ಮೊದಲ ದಿನಗಳಲ್ಲಿ ಸಾರ್ವಜನಿಕ ಭಾಗೀಧಾರಿಕೆ ಕಡಿಮೆ ಇತ್ತು. ಕ್ರಮೇಣ ಜನರ ಪಾಲ್ಗೊಳ್ಳುವಿಕೆ ಜಾಸ್ತಿಯಾಯಿತು. ಬರೋಬ್ಬರಿ 53 ಲಕ್ಷಕ್ಕೂ ಹೆಚ್ಚು ಜನರು/ವ್ಯಕ್ತಿಗಳು ಉತ್ಸಾಹದಿಂದ ಭಾಗವಹಿಸಿದರು. ಸಾಮೂಹಿಕ 1,11,55,879 ಮಾನವ-ಗಂಟೆಗಳನ್ನು ಅಭಿಯಾನಕ್ಕೆ ಮೀಸಲಿಟ್ಟರು.
ಗ್ರಾಮ ಪಂಚಾಯತ್ ನ ಒಟ್ಟು 352 ಗ್ರಾಮಗಳು ಸೇರಿದಂತೆ ವೈಯುಕ್ತಿಕ ಮನೆಗಳು, ಬಸ್ಸು, ರೈಲು ನಿಲ್ದಾಣಗಳಲ್ಲಿ ತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ನೀಡಲಾಯಿತು. ಪಂಚಾಯತ್ ವ್ಯಾಪ್ತಿ, ಶಾಲೆ , ಕಾಲೇಜು ಹಾಗೂ ವಿವಿಧ ಸಂಘಟನೆಗಳು ಸೇರಿ ಪ್ರತಿಜ್ಞಾ ವಿಧಿ ಸ್ವೀಕಾರ, ಜಾಥಗಳನ್ನು ಕೈಗೊಂಡವು.
ಬಯಲು ಮುಕ್ತ ಶೌಚಾಲಯ
ಗ್ರಾಮಾಂತರ ಪ್ರದೇಶಗಳಲ್ಲಿ ನಿರ್ಮಾಣ ಆಗಿರುವ ಸಾರ್ವಜನಿಕ ಶೌಚಾಲಯ, ಶಾಲಾ ಕಾಲೇಜುಗಳಲ್ಲಿ ಮತ್ತು ವೈಯುಕ್ತಿಕ ಶೌಚಾಲಯ ಬಳಸುವಿಕೆ ಅಭಿಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು. ಮಾಹಿತಿ, ಶಿಕ್ಷಣ ಮತ್ತು ಸಂವಹನ ಅಭಿಯಾನಗಳು ಮತ್ತು ಸಂದೇಶವನ್ನು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಹರಡುವ ಮೂಲಕ ಜನರಿಕೆ ಮಹತ್ವವನ್ನು ಮನವರಿಕೆ ಮಾಡಲಾಯಿತು.
ಗ್ರಾಮಗಳ ಸ್ವಚ್ಛತೆಗೆ ಆದ್ಯತೆ
ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಛ ಸಂಕೀರ್ಣಗಳ ಕುರಿತಾಗಿ ಜನರಿಗೆ ಮನವರಿಕೆ ಮಾಡುವ ಕಾರ್ಯಕ್ರಮ ಈ ಅವಧಿಯಲ್ಲಿ ಮಾಡಲಾಯಿತು. ಪಂಚಾಯತ್ ನ ಸ್ವಚ್ಛ ವಾಹಿನಿಗಳ ಮೂಲಕ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆ – ವಿಂಗಡಣೆ ಕುರಿತಾಗಿ ಜಾಗೃತಿ ಮೂಡಿಸಲಾಯಿತು.
ಸಮಗ್ರ ಘನತ್ಯಾಜ್ಯ ನಿರ್ವಹಣೆ - ಜಾಗೃತಿ
ಈ ಅವಧಿಯಲ್ಲಿ ಸುಳ್ಯ, ಬಂಟ್ವಾಳ, ಕಡಬ, ಪುತ್ತೂರು ಮತ್ತು ಉಳ್ಳಾಲ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಅಧ್ಯಯನ ಪ್ರವಾಸವನ್ನು ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮ ಪಂಚಾಯತ್ ನಲ್ಲಿ ಕಾರ್ಯಾಚರಣೆಯಲ್ಲಿರುವ ಎಂ.ಆರ್.ಎಫ್ ಘಟಕ (ಸಮಗ್ರ ಘನತ್ಯಾಜ್ಯ ನಿರ್ವಹಣಾ ಘಟಕ) ಕ್ಕೆ ಏರ್ಪಡಿಸಲಾಯಿತು. ಈ ಮೂಲಕ ಗ್ರಾಮ ಪಂಚಾಯತ್ನಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ - ಜಾಗೃತಿ
ಈ ಅವಧಿಯಲ್ಲಿ ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಕುರಿತು ಜಾಗೃತಿ ಮೂಡಿಸಲಾಯಿತು. ವಿವಿಧ ಗ್ರಾಮ ಪಂಚಾಯತ್ ಗಳು ಕರಪತ್ರ ಸೇರಿದಂತೆ ಮಾಹಿತಿ ಫಲಕಗಳನ್ನು ಅಳವಡಿಸಿದವು. ಸ್ವಚ್ಛ ವಾಹಿನಿಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅಡಿಯೋಗಳನ್ನು ಪ್ರಚಾರ ಮಾಡಲಾಯಿತು.
ಧರ್ಮಸ್ಥಳ- ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಘೋಷಣೆ:
ಕರ್ನಾಟಕ ರಾಜ್ಯ ಮಾಲಿನ್ಯ ಆಯೋಗದ ಸುತ್ತೋಲೆಯಂತೆ ಧರ್ಮಸ್ಥಳ ಗ್ರಾಮ/ನಗರ ವನ್ನು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಘೋಷಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಹಾಗೂ ಸಾರ್ವಜನಿಕರೊಂದಿಗೆ ಸಭೆಗಳನ್ನು ನಡೆಸಲಾಯಿತು. ಅಂತಿಮವಾಗಿ 2023ರ ಅಕ್ಟೋಬರ್ 2 ರಂದು ರಾಜ್ಯ ಸಭಾ ಸದಸ್ಯರಾದ ಡಾ. ಡಿ ವಿರೇಂದ್ರ ಹೆಗಡೆಯವರು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮ/ನಗರವೆಂದು ಘೋಷಿಸಿದರು.
ಅಕ್ಟೋಬರ್ -2 – 492 ಕಾರ್ಯಕ್ರಮಮಗಳು
ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಸ್ವಚ್ಛತಾ ಹಿ ಸೇವೆ ಯ ಪ್ರಯುಕ್ತ ಅಕ್ಟೋಬರ್ 2 ರಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 492 ಸ್ವಚ್ಛತಾ ಶ್ರಮದಾನ, ಜಾಗೃತಿ ಕಾರ್ಯಕ್ರಮಗಳು ನಡೆದವು. ಬೆ.10 ರಿಂದ 11 ಗಂಟೆಯವರೆಗೆ ಏಕಕಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಶಾಲೆ, ಕಾಲೇಜು ಸೇರಿದಂತೆ ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾದರು.
ಈ ಅವಧಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದ ವಿವರ
ಕ್ರ.ಸಂ ಒಟ್ಟು ಕಾರ್ಯಕ್ರಮ
1. ಬೀಚ್ ಸ್ವಚ್ಛತೆ 10
2. ನದಿ ತೀರಗಳ ಸ್ವಚ್ಛತೆ 10
3. ಪ್ರವಾಸಿ ತಾಣ ಸ್ವಚ್ಛತೆ 26
4. ಸಾರ್ವಜನಿಕ ಪ್ರದೇಶ 126
5. ಶಾಲಾ ಅವರಣ ಸ್ವಚ್ಛತೆ 1780
6. ಕಸ ವಿಲೇವಾರಿ 352
7. ಸಾರ್ವಜನಿಕ ಶೌಚಾಲಯ 42
8. ಸ್ವಚ್ಛತಾ ಪ್ರತಿಜ್ಞೆ 1779
9. ವಿಶೇಷ ಸಂವಾದ 106
10. ಸ್ವಚ್ಛತಾ ಜಾಥ 154
11. ಶ್ರಮದಾನ 167
12. ಏಕ ಬಳಕೆ ಪ್ಲಾಸ್ಟಿಕ್ ನಿಷೇಧ 01
13. ಸ್ವಚ್ಛತಾ ಓಟ 02
14. ಮಾನವ ಸರಪಳಿ 02
15. ಸ್ವಚ್ಛ ವಾಹಿನಿ & ಮಹಿಳೆಯರು 05.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ