ಅಕ್ಟೋಬರ್ 8 ರಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವತರಣೋತ್ಸವ - ಅಮೃತೋತ್ಸವ 2023

Upayuktha
0


ಮಂಗಳೂರು: ಅಮ್ಮ ಎಂದು  ವಿಶ್ವದಾದ್ಯಂತ ಕೋಟ್ಯಾಂತರ ಭಕ್ತರಿಂದ ಆರಾಧಿಸಲ್ಪಡುತ್ತಿರುವ ಸದ್ಗುರು ಅಮೃತಾನಂದಮಯಿ ದೇವಿಯವರ 70 ನೆಯ ಅವತರಣೋತ್ಸವವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲು ನಿರ್ಧರಿಸಲಾಗಿದೆ.


ಆ ಪ್ರಯುಕ್ತ ಮಂಗಳೂರಿನ ಮಾತಾ ಅಮೃತಾನಂದಮಯಿ ಮಠ ಹಾಗೂ ಸೇವಾ ಸಮಿತಿಯ ವತಿಯಿಂದ  ಅಕ್ಟೋಬರ್ 8 ರಂದು ಬೆಳಗ್ಗೆ 9.00 ಗಂಟೆಯಿಂದ ಮಧ್ಯಾಹ್ನ1.00ರ ತನಕ  ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಸಾರಥ್ಯದಲ್ಲಿ ಶ್ರೀ ಗುರು ಪಾದುಕಾಪೂಜೆ, ಧ್ಯಾನ, ಸತ್ಸಂಗ, ಭಜನೆ, ಮಂಗಳಾರತಿ,  ಮಠದ ಮಾನವೀಯ ಸೇವಾ ಉಪಕ್ರಮಗಳಿಗೆ ಚಾಲನೆ  ಪ್ರಸಾದ ಹಾಗೂ ಮಹಾಪ್ರಸಾದ ವಿತರಣೆ ಇರುತ್ತದೆ.


ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ನ ಸನ್ಮಾನ್ಯ ಸದಸ್ಯರಾದ ತಿಪ್ಪಣಪ್ಪ ಕಮಕನೂರು ಅವರು ಭಾಗವಹಿಸಿ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿರುವರು. ಗೌರವಾನ್ವಿತ ಅತಿಥಿಗಳಾಗಿ ಮಂಗಳೂರಿನ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕರಾವಳಿ ಕಾವಲು ಪಡೆಯ ಜಿಲ್ಲಾ ಕಾರ್ಯಾಧೀಕ್ಷಕರಾದ ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರಾ ಭಾಗವಹಿಸಲಿರುವರು.


ಅಮೃತ ವಿಶ್ವಕುಟುಂಬದ ಸದಸ್ಯರಾಗಲು ಅವಕಾಶ

ಈ ಸಂದರ್ಭದಲ್ಲಿ ವಿಶ್ವದ ಪ್ರತಿಷ್ಠಿತ ಮಾತಾ ಅಮೃತಾನಂದಮಯಿ ಮಠದ ಸೇವಾರ್ಥಿಗಳಾಗಿ ಅಮ್ಮನ ಪ್ರೀತಿಗೆ ಪಾತ್ರರಾಗಬಯಸುವವರಿಗೆ ಅವಕಾಶವಿರುತ್ತದೆ.


ಅಮ್ಮನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ಸೇವಾ ಸಮಿತಿ ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ ತಿಳಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top