ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಪಾಲ್ಗೊಂಡ ಶಾಸಕ ಡಾ. ಭರತ್ ಶೆಟ್ಟಿ ವೈ

Upayuktha
0


ಮಂಗಳೂರು: ನಗರದ ಎಲ್ಲೆಲ್ಲೂ ಕಂಡುಬಂದ ಕೇಸರಿ ರಂಗು, ಕೇಸರಿ ಬಂಟಿಂಗ್ಸ್, ಕಟೌಟ್ಗಳು, ಇದರ ಎಲ್ಲದರ ನಡುವೆ ಕೇಸರಿ ಶಾಲು ಬಟ್ಟೆಗಳನ್ನ ತೊಟ್ಟುಕೊಂಡ ಹಿಂದೂ ಸಂಘಟನೆಯ ವೀರ ಕಟ್ಟಾಳುಗಳು. ಇದು ಸೋಮವಾರ ಮಂಗಳೂರಿನಲ್ಲಿ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಕಂಡು ಬಂದ ಅಭೂತಪೂರ್ವ ದೃಶ್ಯ.


ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಶೌರ್ಯ ಜಾಗರಣ ರಥವನ್ನು ಸ್ವಾಗತಿಸುವ ಕಾರ್ಯಕ್ರಮ ಜತೆಗೆ ಭವ್ಯ ಶೋಭಾಯಾತ್ರೆಯಲ್ಲಿ  ಹೆಜ್ಜೆ ಹಾಕಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸೇರಿದಂತೆ ಬಿಜೆಪಿ ಮುಖಂಡರು, ವಿಎಚ್‌ಪಿ, ಬಜರಂಗದಳ ನೇತಾರರು ಕೇಸರಿ ಪೇಟ, ಶಾಲು ಧರಿಸಿ ಪಾಲ್ಗೊಂಡರು.



ಹಿಂದೂ ಸಮಾಜದ ಶೌರ್ಯ ಜಾಗೃತಿಗಾಗಿ ವಿಶ್ವ ಹಿಂದೂ ಪರಿಷತ್ ತನ್ನ 60ನೇ ವರ್ಷದ  ಶುಭ ಸಂದರ್ಭದಲ್ಲಿ ಹಮ್ಮಿಕೊಂಡ  ಶೌರ್ಯ ಜಾಗರಣ ರಥ ಯಾತ್ರೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತ ಬಂಧುಗಳು ಸೇರಿ ಯಶಸ್ವಿಗೊಳಿಸಿರುವುದಕ್ಕೆ ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top