ಕೋಡಿಕಲ್: ಯಕ್ಷಗಾನವು ಇಂದು ವಿಶ್ವವ್ಯಾಪಿಯಾಗಿದೆ. ಪಂಡಿತ-ಪಾಮರರೂ ಇಂದು ಏಕ ಪ್ರಕಾರವಾಗಿ ಈ ರಂಗದಲ್ಲಿ ತಮ್ಮ ಚಾಕಚಾಕ್ಯತೆಯನ್ನು ತೋರಿಸುತ್ತಿದ್ದಾರೆ. ಶ್ರೀಕುರು ಅಂಬಾ ದೇವಳದ ಸಹಿತ ಅನೇಕ ಪುಣ್ಯಕ್ಷೇತ್ರಗಳಲ್ಲಿ ಈ ಸೇವೆ ನಿರಂತರವಾಗಿ ನಡೆಯುತ್ತಿದೆ. ಇಂದು ಕೂಡಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯದಿಂದ ಉಮೇಶ ಕರ್ಕೇರರು ಒಂದು ಉತ್ತಮ ಕಾರ್ಯಕ್ರಮ ನೀಡಿದ್ದಾರೆ. ಅವರಿಗೆ ಶ್ರೀದೇವರು ಅನುಗ್ರಹಿಸಲಿ ಎ೦ದು ಕುರು ಅಂಬಾ ದೇವಳದ ಆಡಳಿತ ಮೊಕ್ತೇಸರರಾದ ಪಿ. ಮಹಾಬಲ ಚೌಟ ಹೇಳಿದರು. ಉಮೇಶ ಕರ್ಕೇರ ತಂಡದ ಸದಸ್ಯ ಚಿಂತನ್ ಆರ್. ಕೆ.ಯವರನ್ನು ಅವರ ಯಕ್ಷಗಾನೀಯ ಸೇವೆಗಾಗಿ ಗೌರವಿಸಲಾಯಿತು.
ದೇವಳದ ಟ್ರಸ್ಟಿಗಳಾದ ಪುಷ್ಪರಾಜ್ ಶೆಟ್ಟಿ, ಜಾಹ್ನವಿ ರಮೇಶ್ ಶೆಟ್ಟಿ, ನಿರೂಪಕ ರಾಕೇಶ್ ಶೆಟ್ಟಿ, ಆಧ್ಯಾಪಿಕೆ ಶ್ರೀಮತಿ ಕೃಪಾ ಯನ್. ಖಾರ್ವಿ ಅತಿಥಿಗಳಾಗಿದ್ದರು. ಸೇವಾ ಸಮಿತಿಯ ನಿತೇಶ್ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ