ಡಾ. ನೆಗಳಗುಳಿಯವರ 'ಕಡಲ ಹೂವು' ಗಜಲ್ ಸಂಕಲನ ಲೋಕಾರ್ಪಣೆ

Upayuktha
0


ಮಂಗಳೂರು: ಮಂಗಳೂರಿನ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ 16ನೇ ವಾರ್ಷಿಕ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಮಂಗಳೂರಿನ ವೈದ್ಯ ಡಾ ಸುರೇಶ ನೆಗಳಗುಳಿ ಇವರ ಮೂರನೇಯ ಗಜಲ್ ಸಂಕಲನ ಕಡಲ ಹೂವು ಭಾನುವಾರ (ಅ.29) ಸ್ಥಳೀಯ ಪುರಭವನದಲ್ಲಿ ಲೋಕಾರ್ಪಣೆಗೊಂಡಿತು.


ಪಾಣೆ ಮಂಗಳೂರಿನ ರೈತ ಸೇವಾ ಸಂಘದ ಮುಖ್ಯಸ್ಥ ಜಯಶಂಕರ ಬಾಸ್ರಿತ್ತಾಯ ಇವರು ಬಿಡುಗಡೆ ಗೊಳಿಸಿದ ಈ ಸಮಾರಂಭದಲ್ಲಿ ಧರ್ಮದರ್ಶಿ ಹರಿಕೃಷ್ಷ ಪುನರೂರು, ಕಿನ್ಮಿಗೋಳಿ ಯುಗ ಪುರುಷದ ಭುವನಾಭಿರಾಮ ಉಡುಪ, ಮೂಡಬಿದಿರೆಯ ಧನಲಕ್ಷ್ಮೀ ಗೇರುಬೀಜ ಮಾಲಕ ಶ್ರೀಪತಿ ಭಟ್ ಮತ್ತು ಪಿ.ವಿ ಕುಮಾರ್, ಕೊಳ್ಚಪ್ಪೆ ಗೋವಿಂದ ಭಟ್, ಜಯಾನಂದ ಪೆರಾಜೆ ಭಾಗಿಯಾದರು.


ಕೃತಿಕಾರ ಡಾ ಸುರೇಶ ನೆಗಳಗುಳಿಯವರು ತನ್ನ ಈ ಸಂಕಲನದಲ್ಲಿ ಕನ್ನಡ, ತುಳು, ಹವ್ಯಕ, ಇಂಗ್ಲಿಷ್, ಹಿಂದಿ, ಮಲಯಾಳಂ ಭಾಷೆಗಳ ವಿವಿಧ ಮಾದರಿಯ ಗಜಲ್ ಇರುವ ಬಗ್ಗೆ ತಿಳಿಸುತ್ತಾ ಅದರಲ್ಲೊಂದು ಗಜಲನ್ನು ವಾಚಿಸಿದರು. ಬಳಿಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. 


ರಶ್ಮಿ ಸನಿಲ್ ನಿರೂಪಣೆ ಗೈದ ಈ ಸಮಾರಂಭದಲ್ಲಿ ಹಾ.ಮ. ಸತೀಶ, ರತ್ನಾ ಭಟ್, ಕಲ್ಲಚ್ವು ಮಹೇಶ್ ನಾಯಕ್, ರೇಖಾ ಸುದೇಶವರಾವ್, ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಜಿ.ಕೆ ಶಾಸ್ತ್ರಿ, ಸೌಮ್ಯಾ ಗೋಪಾಲ್, ನಾಡಿನ ಸಮಾಚಾರ ಪತ್ರಿಕೆಯ ಬಸವರಾಜ್ ಯಲ್ಲಪ್ಪಾ ಉಪ್ಪಾರಟ್ಟಿ, ರೇಮಂಡ್ ಡಿಕುನ್ಹ, ರಾಧಾಕೃಷ್ಣ ಉಳಿಯತ್ತಡ್ಕ, ವಾಮನ ರಾವ್ ಬೇಕಲ್, ವೀಣಾ ಕಾರಂತ ಮುಂತಾದವರು ಉಪಸ್ಥಿತರಿದ್ದರು. ಇದೇ ಸಮಾರಂಭದಲ್ಲಿ ಐವತ್ತು ಕವಿಗಳ ಕೃತಿಗಳು ಲೋಕಾರ್ಪಿತವಾದುದು ವಿಶೇಷವಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top