ಮಂಗಳೂರು: ಕೆನರಾ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಅಮೃತ ಸೋಮೇಶ್ವರವರ ಬದುಕು ಬರಹ -ಸಾಹಿತ್ಯ ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಸಿಂಧೂರ, ತನ್ವಿತ್, ವರ್ಷ ಹೆಚ್, ಅಶ್ವಿನಿ, ಸಮೃದ್ಧಿ, ಶ್ರೀನಿಧಿ ಇವರು ಅಮೃತ ಸೋಮೇಶ್ವರ ಅವರು ಸಂಗ್ರಹಿಸಿದ ತುಳು ಪಾಡ್ಡನ ಅವರ ಕವನ ಹಾಗೂ ಕೃತಿಗಳನ್ನು ಪರಿಚಯಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು.ಎಸ್, ಕನ್ನಡ ಸಂಘದ ಸಂಯೋಜಕಿ ಶೈಲಜಾ ಪುದುಕೋಳಿ ಉಪಸ್ಥಿತರಿದ್ದರು. ಕು.ಪ್ರತೀಕ್ಷಾ ಸ್ವಾಗತಿಸಿ, ಶ್ರೀ ವೈಷು ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ