ಗೋವಿಂದ ದಾಸ ಕಾಲೇಜಿನಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ

Upayuktha
0


'

ಸುರತ್ಕಲ್: ಕಡಲತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ವಿಜೇತ ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯನ್ನು ಗೋವಿಂದ ದಾಸ ಕಾಲೇಜಿನ ಗ್ರಂಥಾಲಯದಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಶಿವರಾಮ ಕಾರಂತರ ಬಗ್ಗೆ ಹಾಗು ಅವರ ಬರಹದ ಬಗ್ಗೆ ಅರಿವು ಮೂಡಿಸಲು, ಅವರು ಬರೆದ ಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.




ಕಾಲೇಜಿನ ಪ್ರಾಂಶುಪಾಲ ಪ್ರೋ.ಪಿ.ಕೃಷ್ಣಮೂರ್ತಿಯವರು ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸುತ್ತಾ, ಶಿವರಾಮ ಕಾರಂತರು ಮಾನವತಾವಾದಿ, ಪರಿಸರ ಪ್ರೇಮಿಯಾಗಿದ್ದು, ಕಾರಂತರು ಕನ್ನಡದಲ್ಲಿ ವಿವಿಧ ಕಲೆಗಳ ಹಾಗೂ ಜ್ಞಾನ ಶಾಖೆಗಳ ಕೃತಿಗಳು ಬರಬೇಕೆಂದು ಆಶಿಸಿ ಕೃತಿಗಳನ್ನು ರಚಿಸಿ, ಕನ್ನಡ ವಾಙ್ಮಯವನ್ನು ಶ್ರೀಮಂತಗೊಳಿಸಿದರು ಎಂದು ಅಭಿಪ್ರಾಯಪಟ್ಟರು. 




ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿಯನ್ನು ಬೆಳೆಸುವ ಆಶಯದೊಂದಿಗೆ 2023-24 ರ ಸಾಲಿನ ಪುಸ್ತಕ ಪ್ರೀತಿ ಪರಿಚಯ - ಸರಣಿ ಕಾರ್ಯಕ್ರವiವನ್ನು ಕಾರಂತರ ಜನ್ಮದಿನಾಚರಣೆಯಂದು ಪ್ರಾರಂಭಿಸಲಾಯಿತು. ಆದಿನ ತೃತೀಯ ಬಿ.ಎ ವಿದ್ಯಾರ್ಥಿ ಕಿಶನ್ ನಾಯ್ಕ ರವರು ಶಿವರಾಮ ಕಾರಂತರು ಬರೆದ “ಅಳಿದುಳಿದ ನೆನಪುಗಳು” ಎಂಬ ಪುಸ್ತಕವನ್ನು ಪರಿಚಯಿಸಿದರು. 1995 ರಲ್ಲಿ ಎಸ್.ಬಿ.ಎಸ್ ಪ್ರಕಾಶಕರು ಪ್ರಕಟಿಸಿದ ಈ ಪುಸ್ತಕವು 111 ಪುಟಗಳನ್ನು ಒಳಗೊಂಡಿದೆ. ಹುಚ್ಚು ಮನಸ್ಸಿನ ಹತ್ತು ಮುಖಗಳು, ಸೃತಿಪಟಲದಿಂದ ಮತ್ತು ಅಳಿದುಳಿದ ನೆನಪುಗಳು - ಕೃತಿಗಳಲ್ಲಿ ಅವರ ಆತ್ಮಕಥನಗಳಾಗಿದ್ದು, ಅಳಿದುಳಿದ ನೆನಪುಗಳಲ್ಲಿ ಕಾರಂತರು ತಮ್ಮ ಸಿಹಿ ಕಹಿ ನೆನಪುಗಳನ್ನು ನೆನಪಿಸಿಕೊಂಡಿದ್ದಾರೆ. 




ಆತ್ಮಕಥನಗಳಾದ ಹುಚ್ಚುಮನಸ್ಸಿನ ಹತ್ತು ಮುಖಗಳು ಹಾಗು ಸ್ಮøತಿ ಪಟಲದಿಂದ – ಇವುಗಳಿಗಿಂತ ಭಿನ್ನವಾಗಿ ಅವರ ಸಿಹಿ ಕಹಿಗಳ ಹನ್ನೆರಡು ನೆನಪುಗಳನ್ನು ಹಂಚಿಕೊಂಡಿದ್ದಾರೆ. ನೆನಪು ಮಾಡಿಕೊಳ್ಳಲು ಇಷ್ಟಪಡದ ಪ್ರಸಂಗ - ನೆನೆಯಲೊಲ್ಲದ ಮೊನ್ನೆ” ಯಲ್ಲಿ ತಮ್ಮ ಹೆಂಡತಿ ಲೀಲಾಳ ಮಾನಸಿಕ ಅಸ್ವಸ್ಥತೆ, ಮಗನ ಸಾವಿನ ಬಗ್ಗೆ ವಿವರಿಸಿದ್ದಾರೆ. ಪುತ್ತೂರಿನಲ್ಲಿದ್ದ 4 ದಶಕಗಳ ಬಗ್ಗೆ, ಸ್ವದೇಶ, ವಿದೇಶಗಳ್ಲಿ ದೊರೆತ ಸಿಹಿಕಹಿ ಅನುಭವಗಳು, ಅಪದ್ಭಾಂದವರ ಬಗ್ಗೆ, ಬದುಕನ್ನು ರಂಜಿಸಿದ ಅಸಂಖ್ಯ ಅನುಭವಗಳು, ಬಾಳಿನ ತೃಪ್ತಿ-ಅಸಂತೃಪ್ತಿಗಳ ಬಗ್ಗೆ ಬರೆದದ್ದನ್ನು ವಿವರಿಸಿದರು. ನಾವು ಒಬ್ಬ ಉತ್ತಮ ಸಾಹಿತಿಯಾಗಬೇಕಾದರೆ ಮೊದಲು ಪ್ರಮುಖರ ಜೀವನ ಚರಿತ್ರೆಗಳನ್ನು ಓದಬೇಕೆಂದು ತಮ್ಮ ಪುಸ್ತಕ ಪ್ರೀತಿ ಪರಿಚಯ ಕಾರ್ಯಕ್ರಮದಲ್ಲಿ ಹೇಳಿದರು. 




ಅ,12 ರಂದು ದ್ವಿತೀಯ ಬಿ.ಎ ವಿದ್ಯಾರ್ಥಿ ಮನೀಶ್ ಡಿ.ಶೆಟ್ಟಿಯವರು ಉಗ್ಗಪ್ಪ ಪೂಜಾರಿಯವರು ಬರೆದ “ಆಜ್ಜೆ ನಡ್ತಿನ ಗೋಳಿದ ಮರ” ಎಂಬ ತುಳು ಪುಸ್ತಕವನ್ನು ತುಳುವಿನಲ್ಲಿಯೇ ಪರಿಚಯಿಸಿದರು. ಉಗ್ಗಪ್ಪ ಪೂಜಾರಿಯವರು ಅಜ್ಜೆ ನಡ್ತಿನ ಗೋಳಿದ ಮರ ಪುಸ್ತಕದಲ್ಲಿ ತುಳು ಜನಾಂಗದವರ ಆಚಾರ-ವಿಚಾರಗಳನ್ನು ವಿಮರ್ಶಾತ್ಮಕವಾಗಿ ಬರೆದಿದ್ದಾರೆ. ಮನೀಶ್‍ರವರು ಅನಾದಿಕಾಲದಿಂದಲೂ ಬಂದ ಮುಡಿಪು ಕಟ್ಟುವುದು, ಅದರ ಉದ್ದೇಶ, ಚೌತಿಪರ್ಬ, ಮಾರ್ನೆಮಿ. ಸೋಣ ಸಂಕ್ರಾಂತಿ, ತುಳಸಿ ಪರ್ಬ, ಕೊರೆಲ್ ಪಾಡುನು ಎಂಬಿತ್ಯಾದಿ ವಿಷಯಗಳನ್ನು ನಿರೂಪಿಸಿದರು. 



ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಪಿ.ಕೃಷ್ಣಮೂರ್ತಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಹಾಗು ಮಾನವಿಕಾ ವಿಭಾಗದ ಮುಖ್ಯಸ್ಥ ಪ್ರೋ. ಹರೀಶ ಆಚಾರ್ಯ, ಕಿಶನ್ ನಾಯ್ಕ ಹಾಗು ಮನೀಶ್ ಡಿ.ಶೆಟ್ಟಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಉಪನ್ಯಾಸಕರುಗಳಾದ ಡಾ.ಸುಧಾ ಯು, ಡಾ.ವಿಜಯಲಕ್ಷ್ಮೀ, ಡಾ ಆಶಾ, ಡಾ.ಪ್ರಸಾದ, ದಯಾ ಸುವರ್ಣ, ರಶ್ಮೀ ಕಾಯರಮಾರ್, ಅಕ್ಷತಾ ಶೆಟ್ಟಿ, ಗ್ರಂಥಪಾಲಕಿ ಡಾ. ಸುಜಾತಾ ಬಿ, ಗ್ರಂಥಾಲಯದ ಸಿಬ್ಬಂದಿಗಳಾದ ಸಾವಿತ್ರಿ ಮತ್ತು ಸುಮನ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top