ನಿಟ್ಟೆ: ಅ. 15 ರಂದ 17 ರವರೆಗೆ ತೆಲಂಗಾಣದ ವರಂಗಲ್ ನಲ್ಲಿ ನಡೆದ ದಕ್ಷಿಣ ವಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 18 ವರ್ಷದ ಒಳಗಿನ ವಯೋಮಿತಿಯ 3,000 ಮೀಟರ್ ಓಟದಲ್ಲಿ ಡಾ.ಎನ್.ಎಸ್.ಎ.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಕಾಮರ್ಸ್ ವಿದ್ಯಾರ್ಥಿನಿ ನಂದಿನಿ ಜಿ ಚಿನ್ನದ ಪದಕವನ್ನು ಪಡೆದರೆ,
20 ವರ್ಷದೊಳಗಿನ ವಯೋಮಿತಿಯ 800 ಮೀಟರ್ ಓಟದಲ್ಲಿ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಕಂಚಿನ ಪದಕ ಹಾಗೂ 18 ವರ್ಷದ ಒಳಗಿನ ವಯೋಮಿತಿಯ ಜಾವೆಲಿನ್ ಥ್ರೋನಲ್ಲಿ ಡಾ.ಎನ್.ಎಸ್.ಎ.ಎಂ.ಪಿ.ಯು ಕಾಲೇಜಿನ ದ್ವಿತೀಯ ವರ್ಷದ ಕಾಮರ್ಸ್ ವಿದ್ಯಾರ್ಥಿ ಕುಲದೀಪ್ ಕುಮಾರ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂವರು ಪದಕ ವಿಜೇತರು ಈ ಸಾಧನೆಯಿಂದ ನವೆಂಬರ್ 7 ರಿಂದ 9ರವರೆಗೆ ಕೊಯಮತ್ತೂರಿನಲ್ಲಿ ನಡೆಯಲಿರುವ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ