ಮಂಗಳೂರು: ಓಟ್ ಬ್ಯಾಂಕ್ ರಾಜಕಾರಣ ಹಾಗೂ ಅಲ್ಪಸಂಖ್ಯಾತ ಸಮುದಾಯದ ತುಷ್ಟೀಕರಣದ ಪರಿಣಾಮ ಕೇರಳದಲ್ಲಿ ಬಾಂಬ್ ಸ್ಫೋಟಕ್ಕೆ ಕಾರಣ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಹಾಗೂ ಎಡಪಕ್ಷಗಳು ಹಾಗೂ ಮುಸ್ಲಿಂ ಲೀಗ್‌ನಂತಹ ಪಕ್ಷಗಳು ಎಡಬಿಡಂಗಿ ನೀತಿಯನ್ನು ಇನ್ನಾದರೂ ನಿಲ್ಲಿಸಬೇಕು. ಕಣ್ಣಿದ್ದು ಕುರುಡನಂತೆ ವರ್ತಿಸಿದರೆ ಮತ್ತಷ್ಟು ಬಾಂಬ್ ಸ್ಫೋಟವಾಗುವುದು ಖಚಿತ. ಕೇರಳ ಉಗ್ರರ ಸ್ಲೀಪರ್ ಸೆಲ್ ಆಗಿ ಪರಿವರ್ತನೆ ಯಾಗಿದ್ದು ದೇಶದ್ರೋಹಿ ಸಂಘಟನೆಗಳು ಇಲ್ಲಿಂದಲೇ ಕಾರ್ಯಾಚರಿಸುತ್ತಿವೆ. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಕೇರಳ ಲಿಂಕ್ ಕೇಳಿ ಬಂದಿತ್ತು.
ಇಷ್ಟೆಲ್ಲಾ ಅದರೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಗ್ರರ ಪರವಾದ ಹೇಳಿಕೆ ನೀಡುತ್ತಲೇ ಬಂದಿತ್ತು. ಮಾತ್ರವಲ್ಲ, ರಾಜ್ಯದಲ್ಲಿ ಬೇರೆ ಬೇರೆ ಕಡೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪಾಲ್ಗೊಂಡವರ ಮೇಲಿನ ಕೇಸು ಹಿಂಪಡೆಯಲೂ ಮುಂದಾಗಿದೆ. ಇದೆಲ್ಲಾ ಜಿಹಾದಿ ಮನಸ್ಥಿತಿಯ ಕಿರಾತಕರು ಮತ್ತೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ.
ಕೂಡಲೇ ಎನ್‌ಐಎ ತನಿಖೆ ನಡೆಸಬೇಕು. ಭಾರತ ಇಸ್ರೇಲ್‌ಗೆ ಬೆಂಬಲ ನೀಡಿದ ಕಾರಣ ಮುಸ್ಲಿಂ ಜಿಹಾದಿಗಳಿಂದ ಸ್ಫೋಟವಾಯಿತೆ ಎಂಬುದರ ಬಗ್ಗೆ ಕೂಲಂಕುಷ ತನಿಖೆ ಅಗತ್ಯ. ಈ ನಿಟ್ಟಿನಲ್ಲಿ ಇದರ ತನಿಖೆಯನ್ನು ಎನ್‌ಐಗೆ ಒಪ್ಪಿಸಬೇಕು ಎಂದು ಹೇಳಿಕೆಯಲ್ಲಿ ಡಾ. ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ