ವಿಟ್ಲ: ಕೇಪು ಹವ್ಯಕ ವಲಯದ ವಲಯೋತ್ಸವವು ಇಂದು (ಅ.29) ಕೇಪು ಸುಬ್ರಾಯ ದೇವಸ್ಥಾನದಲ್ಲಿ ಜರುಗಿತು. ವಲಯೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ದೇವರಿಗೆ ಹವ್ಯಕ ವಲಯದ ವತಿಯಿಂದ ಶತರುದ್ರಾಭಿಷೇಕ ಸೇವೆ ಜರುಗಿತು. 41 ಜನ ರುದ್ರಾಧ್ಯಾಯಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ಇದೇ ಸಂದರ್ಭ ಮಹಿಳಾ ವಿಭಾಗದಿಂದ ಕುಂಕುಮಾರ್ಚನೆ ಸೇವೆಯನ್ನು ನಡೆಸಲಾಯಿತು. 31 ಮಹಿಳೆಯರು ಭಾಗವಹಿಸಿದ್ದರು. ವಲಯೋತ್ಸವದ ಅಂಗವಾಗಿ ಅನೇಕ ಸ್ಪರ್ದೆಗಳನ್ನು ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕೇಪು ಹವ್ಯಕ ವಲಯೋತ್ಸವದೊಂದಿಗೆ ಮಂಗಳೂರು ಮಂಡಲ ಸಭೆಯೂ ಇಂದು ಕೇಪು ಸುಬ್ರಾಯ ದೇವಸ್ಥಾನದಲ್ಲಿ ಜರುಗಿತ್ತು. ಮಂಗಳೂರು ಮಂಡಲ ಅಧ್ಯಕ್ಷರಾದ ಉದಯಶಂಕರ ನೀರ್ಪಾಜೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮಂಡಲ ಕಾರ್ಯದರ್ಶಿ ರಮೇಶ್ ಭಟ್ ಸರವು, ಉಪಾಧ್ಯಕ್ಷರಾದ ರಾಜಶೇಖರ ಭಟ್ ಕಾಕುಂಜೆ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಕೇಪು ವಲಯಾದ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುದರ್ಶನ ಸ್ವಾಗತಿಸಿದರು. ಮಂಗಳೂರು ಮಂಡಲ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ರಂಜಿತಾ ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ವಲಯ ಉಪಾಧ್ಯಕ್ಷ ಮೋಹನ.ಎ ವಂದನಾರ್ಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ