ಕಾಸರಗೋಡು: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲದ ಗುಂಪೆ ವಲಯದಲ್ಲಿ ಮಾತೃ ವಿಭಾಗದ ವತಿಯಿಂದ ಇತ್ತೀಚೆಗೆ (ಅ.1) ಶ್ರೀಗಣೇಶ ಪಂಚರತ್ನಸ್ತೋತ್ರ ಪಠಣ, ಕುಂಕುಮಾರ್ಚನೆ ಮತ್ತು ಭಜನಾ ತರಬೇತಿ ನಡೆಯಿತು.
ಧರ್ಮತ್ತಡ್ಕದ ಗುಂಪೆ ವಲಯ ಕಛೇರಿಯಲ್ಲಿ ಬೆಳಗ್ಗೆ 9.45ಕ್ಕೆ ವಲಯ ಮಾತೃಪ್ರಧಾನೆ ಕಾವೇರಿ ಅಮ್ಮ ಗುಂಪೆ, ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ ಧ್ವಜಾರೋಹಣ ನೆರವೇರಿಸಿದರು.
ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಾಮೂಹಿಕವಾಗಿ ಶ್ರೀಗಣೇಶ ಪಂಚರತ್ನ ಸ್ತೋತ್ರ ಪಠಣ ಆರಂಭಿಸಲಾಯಿತು.
ಹನ್ನೆರಡು ಗಂಟೆಗೆ ಮಾತೆಯರಿಂದ ಕುಂಕುಮಾರ್ಚನೆ ನೆರವೇರಿತು. ನಂತರ ನಡೆದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷರಾದ ಶಂಭು ಹೆಬ್ಬಾರ್ ವಹಿಸಿದರು. ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಲಯದ ಪದಾಧಿಕಾರಿಗಳು, ಕಾರ್ಯಕರ್ತರು, ಶಿಷ್ಯಬಂಧುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಮಂಡಲ ಮಾತೃಪ್ರಧಾನೆ ಕುಸುಮಾ ಪೆರ್ಮುಖ, ಅಕ್ಟೋಬರ್ 15 ರಿಂದ ಪೆರಾಜೆಯ ಮಾಣಿಮಠದಲ್ಲಿ ನಡೆಯಲಿರುವ ಶ್ರೀಗುರುಗಳ ನವರಾತ್ರ ನಮಸ್ಯಾ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿ, ಬಾಗಿನ ಸಮರ್ಪಣೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮಂಡಲ ಅಧ್ಯಕ್ಷರಾದ ಉದಯ ಶಂಕರ ನೀರ್ಪಾಜೆ, ಉಪಾಧ್ಯಕ್ಷರಾದ ರಾಜಶೇಖರ ಕಾಕುಂಜೆ, ಕಾರ್ಯದರ್ಶಿ ರಮೇಶ ಭಟ್ ಸರವು ಹಾಗೂ ಇತರ ಪದಾಧಿಕಾರಿಗಳು ಮತ್ತು ಬಾಯಾರು ವಲಯದ ಅಧ್ಯಕ್ಷರಾದ ರವೀಶ ಭಟ್ ಸೊಂದಿ ಹಾಗೂ ವಲಯ ಪದಾಧಿಕಾರಿಗಳು ಆಗಮಿಸಿ ಪೊಸಡಿಗುಂಪೆಯ ಶ್ರೀಶಂಕರ ಧ್ಯಾನ ಮಂದಿರದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಿದರು ಶಂಕರ ರಾವ್ ಕಕ್ವೆ ಪೊಸಡಿ ಗುಂಪೆಯ ವಿಚಾರಗಳನ್ನು ಸಭೆಗೆ ತಿಳಿಸಿದರು.
ಅಪರಾಹ್ನ ನೇರೋಳು ಮಹಾಲಿಂಗ ಭಟ್, ರಾಮಚಂದ್ರ ಭಟ್ ನೇರೋಳು, ಶಂಕರ ನಾರಾಯಣ ಭಟ್ ನೇರೋಳು ಇವರು ಶ್ರೀಶಂಕರ ರಾಮಾರ್ಪಣ ಭಜನಾ ತಂಡದ ಸದಸ್ಯರಿಗೆ ಹಾಗೂ ಮಕ್ಕಳ ಕುಣಿತ ಭಜನಾ ತಂಡಕ್ಕೆ ತರಬೇತಿ ನೀಡಿದರು. ಸಾಯಂಕಾಲ 5.30ಕ್ಕೆ ಶಾಂತಿಮಂತ್ರ, ಶಂಖನಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ