ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ

Upayuktha
0

ಕಾಸರಗೋಡು: ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ಭಾನುವಾರ (ಅ.22) ಮಧ್ಯಾಹ್ನ 12.00 ಘಂಟೆಯಿಂದ 3.00 ಘಂಟೆಯ ತನಕ ಸುಮಾರು ಮೂರು ಘಂಟೆಗಳ ಕಾಲ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ( ರಿ.) ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಡಾ. ವಾಣಿಶ್ರೀ ಕಾಸರಗೋಡು ಅವರು ಕಾರ್ಯಕ್ರಮದ ನಿರೂಪಣೆ ಹಾಗೂ ಸಾಹಿತ್ಯ ಪ್ರಸ್ತುತಿ ಮಾಡಿದರು.


ಗುರುರಾಜ್ ಕಾಸರಗೋಡು, ಗುರುರಾಜ್ ಕಾಸರಗೋಡು, ತನ್ವಿ ಶೆಟ್ಟಿ ಪಾಣಾಜೆ, ಅಹನಾ ಎಸ್ ರಾವ್,  ಹರೀಶ್ ಪಂಜಿಕಲ್ಲು, ಅವನಿ ಎಂ ಎಸ್ ಸುಳ್ಯ, ಸನುಷ ಸುನಿಲ್, ಭಾಸ್ಕರ್ ಅಡೂರ್, ಆದ್ಯಂತ್ ಅಡೂರ್, ಉಷಾ ಸುಧಾಕರನ್, ಚೈತ್ರಾ ಎಡನೀರ್, ಪ್ರಜ್ವಲ್ ಎ, ಸಂದೇಶ್, ಲೋಹಿತ್, ಸುಶಾಂತ್, ಭೂಮಿಕಾ, ಯುಕ್ತಿ, ಧಿಲಾಕ್ಷಾ,  ಗಣಾ, ಅಯುಶ್, ಸಾನ್ವಿತಾ,ದೀಕ್ಷಾ, ರಕ್ಷಾ, ಅಭಿಜ್ಞಾ, ಅಶ್ವತ್, ಹರ್ಷಿತಾ, ಜಸ್ವಿತಾ, ಅಮೋಘ, ಅಮೃತ್, ಐಶ್ವರ್ಯ, ಶಶಾಂಕ್, ಸಹನಾ, ಪ್ರಣಮ್ಯ, ಮಂಜು, ಜಿಶಾ, ಅಕ್ಷತಾ ಮುಂತಾದ ಕಲಾವಿದರು ತಮ್ಮ ಕಲಾಪ್ರತಿಭೆ ಪ್ರದರ್ಶಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.


ಭಾಗವಹಿಸಿದ ಎಲ್ಲಾ ಕಲಾವಿದರಿದರಿಗೆ ಸಂಸ್ಥೆಯ ವತಿಯಿಂದ ದೇವಸ್ಥಾನದ ಆಡಳಿತ ಮುಕ್ತೇಸರರಾದ ನವೀನ್ ಭಟ್, ಸಾಹಿತಿ ಪತ್ರಕರ್ತ ವಿರಾಜ್ ಅಡೂರ್ ಹಾಗೂ ಮೇಕಪ್ ಆರ್ಟಿಸ್ಟ್ ಪ್ರೇಮ್‌ರಾಜ್ ಅರ್ಲಪದವು ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಎಲ್ಲಾ ಕಲಾವಿದರಿಗೆ ದೇವಸ್ಥಾನದ ವತಿಯಿಂದ ಶ್ರೀ ದೇವರ ಬೆಳ್ಳಿಯ ಪದಕ ಹಾಗೂ ಪ್ರಸಾದ ನೀಡಿ ಆಶೀರ್ವದಿಸಿದರು. 


ವರದಿ: ಗುರುರಾಜ್ ಕಾಸರಗೋಡು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top